Home latest Madyapradesh: ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ಇನ್ನು ಮುಂದೆ ಸಿಗಲಿದೆ 450 ರೂ. ಗೆ...

Madyapradesh: ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ಇನ್ನು ಮುಂದೆ ಸಿಗಲಿದೆ 450 ರೂ. ಗೆ LPG ಸಿಲಿಂಡರ್!

Madhyapradesh
Image credit: Ananadbazar.com

Hindu neighbor gifts plot of land

Hindu neighbour gifts land to Muslim journalist

Madhyapradesh: ಕಾಂಗ್ರೆಸ್ (Congress)ಸರ್ಕಾರ ಚುನಾವಣಾ ಪೂರ್ವ ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಗೊತ್ತಿರುವ ಸಂಗತಿ. ಇದೀಗ, ಇದೆ ರೀತಿ ವಿಧಾನಸಭೆ ಚುನಾವಣೆಗೆ ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ(Madhyapradesh )ಆಡಳಿತಾರೂಢ ಬಿಜೆಪಿ ಕೂಡ ಕರ್ನಾಟಕ ಅನುಸರಿಸಿದ ಗ್ಯಾರಂಟಿ ಯೋಜನೆಯ ಜಾರಿಗೆ ಭರದ ಸಿದ್ಧತೆ ನಡೆಸುತ್ತಿದೆ.

ವಿಧಾನಸಭೆ ಚುನಾವಣೆಗೆ ಮತದಾರರನ್ನು ಓಲೈಸಿಕೊಳ್ಳುವ ಸಲುವಾಗಿ ಉಚಿತ ಕೊಡುಗೆಗಳನ್ನು ಘೋಷಿಸುವ ಪೈಪೋಟಿ ತೀವ್ರಗೊಂಡಿದೆ. ಈ ನಡುವೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನೀಡುವ ಕುರಿತು ಘೋಷಣೆ ಮಾಡಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗಿರುವ ಮೀಸಲಾತಿಯನ್ನು ಈಗಿನ ಶೇ.30ರಿಂದ ಶೇ.35ಕ್ಕೆ ಹೆಚ್ಚಳ ಮಾಡಲಾಗುವ ಕುರಿತು ಶಿವರಾಜ ಸಿಂಗ್‌ ಘೋಷಣೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿ ಮಾದರಿಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ (BJP)ಗೆದ್ದರೆ ಹಲವಾರು ಉಚಿತ ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ.ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕೊಡುಗೆಗಳನ್ನು ಘೋಷಿಸಿ ಜಾರಿಗೆ ತರುತ್ತಿದೆ. ಶ್ರಾವಣ ಮಾಸದ ಪ್ರಯುಕ್ತ ‘ಲಾಡ್ಲಿ ಬೆಹೆನಾ’ ಯೋಜನೆಯಡಿ ಮಹಿಳೆಯರಿಗೆ ಈ ಹಿಂದೆ ನೀಡಲಾಗುತ್ತಿದ್ದ 1000ರೂ.ಬದಲಿಗೆ, 1250 ರು. ನೀಡಲಾಗುವುದು. ಅಕ್ಟೋಬರ್‌ ತಿಂಗಳಿನಿಂದ ಇದನ್ನು ಶಾಶ್ವತವಾಗಿ 1250 ರೂ.ಗೆ ಹೆಚ್ಚಳ ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಎಲ್‌ಪಿಜಿ ಸಿಲಿಂಡರ್‌ (LPG Cylinder)450 ರು.ಗೆ ನೀಡಲು ಶಾಶ್ವತ ವ್ಯವಸ್ಥೆ ಮಾಡಲಾಗುವ ಕುರಿತು ಭರವಸೆ ನೀಡಿದ್ದಾರೆ. ಈ ಮೂಲಕ ಮಹಿಳೆಯರಿಗೆ ಶುಭ ಸುದ್ದಿ ನೀಡಲು ಸರಕಾರ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ : ಮತ್ತೆ ಸಿಡಿದ ವಸಂತ ಬಂಗೇರ ,ಇಂದು ಬೆಳ್ತಂಗಡಿಯಲ್ಲಿ ಮಹಾಧರಣಿ