Home latest ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್‌, ಭೀಕರ ಅಪಘಾತಕ್ಕೆ 14 ಜನರ ದಾರುಣ ಸಾವು! 50ಕ್ಕೂ...

ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್‌, ಭೀಕರ ಅಪಘಾತಕ್ಕೆ 14 ಜನರ ದಾರುಣ ಸಾವು! 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ!

Hindu neighbor gifts plot of land

Hindu neighbour gifts land to Muslim journalist

Madhya Pradesh : ಮಧ್ಯ ಪ್ರದೇಶದ ( Madhya Pradesh) ಜಿಲ್ಲೆಯಲ್ಲಿ ಭೀಕರ ಅಪಘಾತ (accident )ಆಗಿರುವ ಘಟನೆ ಬೆಳಕಿಗೆ ಬಂದಿದ್ದು, ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, 14 ಜನ ಮರಣ (death) ಹೊಂದಿರುವ ಘಟನೆ ಬೆಳಕಿಗೆ ಬಂದಿದೆ. ಮೊಹಾನಿಯಾ ಸುರಂಗದ ಬಳಿ ಟ್ರಕ್​ವೊಂದು ನಿಂತಿದ್ದ ಬಸ್​ಗಳಿಗೆ ಡಿಕ್ಕಿ ಹೊಡೆದಿರುವುದಾಗಿದೆ.

ಸತ್ನಾ (satna )ಜಿಲ್ಲೆಯಲ್ಲಿ ಆಯೋಜಿಸಲಾದ ಕೇಂದ್ರ ಗೃಹ ಸಚಿವ ಅಮಿತ್ ಶಾ(amith sha )ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನೇಕ ಪ್ರಯಾಣಿಕರು ನೇರವಾಗಿ ಸಿಧಿ ಜಿಲ್ಲೆಗೆ ತೆರಳಿದ್ದರು. ನಂತರ ಪ್ರಯಾಣಿಕರನ್ನು ಹೊತ್ತ ಬಸ್​​​ಗಳು ಕಾರ್ಯಕ್ರಮ ಮುಗಿದ ನಂತರ ಸತ್ನಾದಿಂದ ಪ್ರಯಾಣಿಕರ ಸ್ವಗ್ರಾಮದತ್ತ ಪ್ರಯಾಣ ಬೆಳಸಿದ್ದವರು. ಬಸ್ ನೇರವಾಗಿ ರೇವಾ ಮೂಲಕ ಹೋಗುತ್ತಿದ್ದ ಸಂದರ್ಭದಲ್ಲಿ ಸಿಧಿ ಜಿಲ್ಲೆಯ ಮೊಹಾನಿಯಾ ಸುರಂಗವನ್ನು ದಾಟಿತ್ತು.

ಸುರಂಗ ದಾಟಿದ ನಂತರ ಬಸ್ಸುಗಳನ್ನು ವಿಶ್ರಾಂತಿ ಕಾರಣದಿಂದಾಗಿ ನಿಲ್ಲಿಸಿದ್ದರು. ಇದೇ ವೇಳೆ, ರೇವಾ ಕಡೆಯಿಂದ ಬರುತ್ತಿದ್ದ ಟ್ರಕ್​ನ ಟೈರ್‌ ಒಡೆದಿದ್ದು, ವಾಹನದ ನಿಯಂತ್ರಣ ತಪ್ಪಿ ಸುರಂಗ ಮಾರ್ಗದ ಬಳಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್‌ಗೆ ಡಿಕ್ಕಿಯಾದ ರಭಸಕ್ಕೆ ಅಲ್ಲಿ ನಿಂತಿದ್ದ ಮೂರು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ

ಈ ಭೀಕರ ಅಪಘಾತದ ವಿಷಯ ತಿಳಿದ ಉನ್ನತ ಅಧಿಕಾರಿಗಳು ಸಮೀಪದ ದೊಡ್ಡ ಆಸ್ಪತ್ರೆಗಳನ್ನೆಲ್ಲಾ ಅಲರ್ಟ್‌ ಮೋಡ್‌ನಲ್ಲಿ ಇರಿಸಿದ್ದರು. ಇದಲ್ಲದೇ ಹಲವು ಆಂಬ್ಯುಲೆನ್ಸ್ ವಾಹನಗಳೂ ಸ್ಥಳಕ್ಕೆ ಆಗಮಿಸಿದವು. ಘಟನೆ ಕುರಿತು ಮಾಹಿತಿ ಪಡೆದ ಸಮೀಪದ ಗ್ರಾಮಗಳ ಜನರು ಕೂಡ ಸ್ಥಳದಲ್ಲಿ ಜಮಾಯಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಮತ್ತು ರೇವಾದ ಸಂಜಯ್ ಗಾಂಧಿ ಆಸ್ಪತ್ರೆ (hospital )ಮತ್ತು ಸಿಧಿ ಜಿಲ್ಲಾ ಆಸ್ಪತ್ರೆಯ ವೈದ್ಯರ(doctor )ಮತ್ತು ಸಿಬ್ಬಂದಿ ತಂಡಕ್ಕೆ ಎಲ್ಲಾ ತುರ್ತು ಸೇವೆಗಳೊಂದಿಗೆ ಸಿದ್ಧರಾಗಿರಲು ಅಧಿಕಾರಿಗಳು ಸೂಚನೆ ನೀಡಿದ್ದರು. ಕೂಡಲೇ ಗಾಯಾಳುಗಳನ್ನು ಆಯಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿ ಪ್ರಕಾರ ಡಿಕ್ಕಿಯ ರಭಸಕ್ಕೆ ಬಸ್​ವೊಂದು ಪಲ್ಟಿಯಾಗಿದ್ದು, ಉಳಿದ ಬಸ್​ಗಳಿಗೆ ಡಿಕ್ಕಿ ರಭಸಕ್ಕೆ ಜಖಂಗೊಂಡಿದ್ದು, ಈ ಭೀಕರ ಅಪಘಾತದಲ್ಲಿ 14 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಆದ್ದರಿಂದ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಹಾಗೂ ಸಾಮಾನ್ಯ ಗಾಯಾಳುಗಳಿಗೆ 1 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಉದ್ಯೋಗ ನೀಡುವುದಾಗಿ ಸಿಎಂ ಶಿವರಾಜ್ ಭರವಸೆ ನೀಡಿದ್ದಾರೆ.

ಇನ್ನು ಅಪಘಾತದ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದಿಯಲ್ಲಿ ಬಸ್ ಪಲ್ಟಿಯಾಗಿ ಸಂಭವಿಸಿದ ಅಪಘಾತದ ಬಗ್ಗೆ ಅತ್ಯಂತ ದುಃಖದ ಸುದ್ದಿ ಬಂದಿದೆ. ದೇವರು ಅಗಲಿದ ಆತ್ಮಗಳಿಗೆ ಅವರ ಪುಣ್ಯ ಪಾದದಲ್ಲಿ ಸ್ಥಾನ ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ಈ ಆಳವಾದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಬರೆದಿದ್ದಾರೆ.