Home latest ಕಾಫಿನಾಡಲ್ಲಿ ಮತ್ತೆ ತಲೆ ಎತ್ತಿದ ಲವ್ ಜಿಹಾದ್ | ಮಗಳಿಗಾಗಿ ತಾಯಿಯ ಕಣ್ಣೀರು

ಕಾಫಿನಾಡಲ್ಲಿ ಮತ್ತೆ ತಲೆ ಎತ್ತಿದ ಲವ್ ಜಿಹಾದ್ | ಮಗಳಿಗಾಗಿ ತಾಯಿಯ ಕಣ್ಣೀರು

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ ಲವ್ ಜಿಹಾದ್. ತಣ್ಣಗಾಯಿತು ಎಂದ ಕೂಡಲೇ ಮತ್ತೆ ಮೈಕೊಡವಿ ನಿಂತುಕೊಂಡಿತು ಲವ್ ಜಿಹಾದ್. ಆದರೆ ಈ ಸ್ಟೋರಿಯಲ್ಲೊಂದು ಟ್ವಿಸ್ಟ್ ಇದೆ. ಅದೇನು ಇಲ್ಲಿ ತಿಳಿಯೋಣ. ಈ ಲವ್ ಜಿಹಾದ್ ಪ್ರಕರಣ ನಡೆದಿರುವುದು ಚಿಕ್ಕಮಗಳೂರಿನಲ್ಲಿ.

ಈ ಜಿಲ್ಲೆಯ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ರಿಜಿಸ್ಟರ್ ಮ್ಯಾರೇಜ್ (Register Marriage) ಆಗಲು ಹೊರಟಿದ್ದು, ನಂತರ ಆದ ಬೆಳವಣಿಗೆ ನಿಜಕ್ಕೂ ವಿಶೇಷ. ಏಕೆಂದರೆ ಈ ಮದುವೆಗೆ ಹುಡುಗಿಯ ತಾಯಿ ಫುಲ್ ಸಪೋರ್ಟ್ ಮಾಡಿದ್ದಾರೆ.

ಪ್ರೀತಿಸಿದ ಈ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ಮದುವೆ ರಿಜಿಸ್ಟರ್ ಸಂದರ್ಭ ಹೈಡ್ರಾಮ ನಡೆದಿತ್ತು. ಈ ಮದುವೆ ವಿಷಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಗೆ ತಿಳಿದು ಭಾರೀ ಗಲಾಟೆನೇ ನಡೆದಿತ್ತು. “ಆದರೆ ಈ ಮದುವೆಗೆ ನನ್ನ ಯಾವುದೇ ಆಕ್ಷೇಪವಿಲ್ಲ, ಅವರಿಬ್ಬರು ಸಂತೋಷವಾಗಿದ್ದರೆ ಅಷ್ಟೇಸಾಕು” ಎಂದು ಯುವತಿಯ ತಾಯಿ ಹೇಳಿಕೆ ನೀಡಿದ್ದು ಮಾತ್ರ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಈ ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಉಮಾ ಪ್ರಶಾಂತ್, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ವಿವಾಹ ನೋಂದಣಿ ಮಾಡಲೆಂದು ಹೋಗಿದ್ದರು. ಈ ಸಂದರ್ಭ ಕೆಲ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು, ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದರು. ಈ ವೇಳೆ ಯುವಕ ತನ್ನ ಮೇಲೆ ಹಿಂದೂ ಪರ ಸಂಘಟನೆಯವರು ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾನೆ. ಅವನ ದೂರಿನನ್ವಯ ಹಿಂದೂ ಪರ ಸಂಘಟನೆಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ, ಠಾಣೆಯ ಮುಂದೆ ಯುವತಿಯ ತಾಯಿ ಶೋಭಾ ಕಣ್ಣೀರು ಹಾಕಿ, ನನ್ನ ಮಗಳ ಜೀವವೇ ನನಗೆ ಮುಖ್ಯ. ಅವರಿಬ್ಬರ ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವಳಿಗೆ ಹಾಗೂ ನನ್ನ ಭಾವೀ ಅಳಿಯನಿಗೆ ಯಾವುದೇ ತೊಂದರೆಯಾಗಬಾರದು. ಅವರಿಬ್ಬರೂ ಮದುವೆಯಾಗಿ ಚೆನ್ನಾಗಿದ್ದರೆ, ನನಗೆ ಅಷ್ಟೇ ಸಾಕು. ಅವರಿಬ್ಬರಿಗೂ ಸಹಿ ಹಾಕಲು ಬಿಟ್ಟು ಮದುವೆ ಆಗಿ ಅವರನ್ನು ಕಳುಹಿಸಿಕೊಡಿ. ಅವರಿಬ್ಬರೂ ಹೂವಿನ ಹಾರ ಹಾಕಿಕೊಂಡು ಮನೆಗೆ ಬರಬೇಕು ಎಂದು ಪತ್ರಕರ್ತರ ಸಮುಖದಲ್ಲಿ ಹೇಳಿಕೊಂಡಿದ್ದರು.

ಚಿಕ್ಕಮಗಳೂರು ನಗರ ಮಹಿಳಾ ಠಾಣೆ ಮುಂದೆ ಮಗಳಿಗಾಗಿ ತಾಯಿ ಕಣ್ಣೀರು ಹಾಕಿದ್ದಾರೆ. ಪ್ರೀತಿಸಿದವನನ್ನೇ ಮದುವೆ ಆಗುತ್ತೇನೆ ಎಂದು ಯುವತಿ ನಿರ್ಧರಿಸಿದ್ದಾಳೆ. ಮಗಳು ಪೊಲೀಸ್ ಜೀಪ್ ಹತ್ತುವಾಗ ಕಣ್ಣೀರಿಟ್ಟ ತಾಯಿ, ಮಗಳ ಜೊತೆ ಮಾತನಾಡಲು ಬಿಡಿ ಎಂದು ಕಣ್ಣೀರಿಟ್ಟಿದ್ದಾಳೆ. ನನ್ನ ಮಗಳು ನನಗೆ ಬೇಕು ಎಂದು ತಾಯಿ ಕಣ್ಣೀರು ಸುರಿಸಿದ್ದಾರೆ.