Home latest ಲೈವ್ ನ್ಯೂಸ್ ಓದುವಾಗಲೇ ಬಾಯಿಯೊಳಗೆ ನೊಣ ಹೋದಾಗ ಏನಾಯ್ತು ? ಈ ವೀಡಿಯೋ ನೋಡಿ

ಲೈವ್ ನ್ಯೂಸ್ ಓದುವಾಗಲೇ ಬಾಯಿಯೊಳಗೆ ನೊಣ ಹೋದಾಗ ಏನಾಯ್ತು ? ಈ ವೀಡಿಯೋ ನೋಡಿ

Hindu neighbor gifts plot of land

Hindu neighbour gifts land to Muslim journalist

ನ್ಯೂಸ್ ಚಾನಲ್ ಆ್ಯಂಕರ್ ಲೈವ್ ನ್ಯೂಸ್ ಕೊಡುತ್ತಿರುವ ಸಂದರ್ಭದಲ್ಲಿ, ನೊಣ ನುಂಗಿ ನಂತರ ನ್ಯೂಸ್ ಓದಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ಪತ್ರಕರ್ತೆ ಫರಾ ನಾಸರ್ ಎಂಬಾಕೆಯೇ ನ್ಯೂಸ್ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದಿದ್ದು ಬಾಯಿಯೊಳಗೂ ಹೋಗಿದೆ. ಆದರೆ ನ್ಯೂಸ್ ಆಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅದನ್ನು ನುಂಗಿ ಸುದ್ದಿ ಓದುವುದನ್ನು ಮುಂದುವರಿಸಿದ್ದಾರೆ.

ಫರಾ ಅದನ್ನು ಹಾಸ್ಯವಾಗಿ ತೆಗೆದುಕೊಂಡು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತನ್ನ ನೇರ ಪ್ರಸಾರದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಒಂದು ಲಕ್ಷ ವೀಕ್ಷಣೆ ಕಂಡಿದೆ. ಪಾಕಿಸ್ತಾನದಲ್ಲಿ ಮಳೆಯ ಬಗ್ಗೆ ಹಾನಿ ಎಂಬ ವಿಷಯದ ಬಗ್ಗೆ ಎಂದು ನಾಸರ್ ವರದಿ ಮಾಡುತ್ತಿದ್ದಾಗ ಅವಳ ಬಾಯಿಯತ್ತ ನೊಣ ಬಂದಿದೆ.

‘ಪಾಕಿಸ್ತಾನವು ಈ ರೀತಿಯ ಮಾನ್ಸೂನ್ ಹಾವಳಿ ನೋಡಿಲ್ಲ. ಎಂಟು ವಾರಗಳು ನಿಲ್ಲದ ಧಾರಾಕಾರ ಮಳೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ’ ಎಂದು ಪಾಕಿಸ್ತಾನದ ಬಗ್ಗೆ ವರದಿ ಮಾಡುವಾಗ ನೊಣ‌ಹಾರಿ ಬಂದು ಬಾಯೊಳಗೆ ಸೇರಿದೆ. ಆಗ ಆಕೆ ಅನಿವಾರ್ಯವಾಗಿ ಅದನ್ನು ನುಂಗಲೇ ಬೇಕಾಯಿತು. ಈ
ಸಂದರ್ಭದಲ್ಲಿ ಆಕೆ ತನ್ನ ವೀಕ್ಷಕರಿಗೆ ಏನಾಯಿತು ಎಂಬುದನ್ನು ತಿಳಿಸದೇ ಮತ್ತು ತನ್ನ ಕೆಲಸ ಮುಂದುವರಿಸಿದ್ದಾರೆ.

ಆಕೆ ನೊಣ ನುಂಗುತ್ತಲೇ, ತನ್ನ ಕೆಲಸ ಮುಂದುವರಿಸಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಆಕೆಯ ಸಹೋದ್ಯೋಗಿಗಳು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.