Home latest Cooking Gas: ಈ ಟಿಪ್ಸ್‌ ಫಾಲೋ ಮಾಡಿ, ಒಂದು ತಿಂಗಳು ಬರುವ ಗ್ಯಾಸ್‌ ಎರಡು ತಿಂಗಳು...

Cooking Gas: ಈ ಟಿಪ್ಸ್‌ ಫಾಲೋ ಮಾಡಿ, ಒಂದು ತಿಂಗಳು ಬರುವ ಗ್ಯಾಸ್‌ ಎರಡು ತಿಂಗಳು ಬರುತ್ತೆ!!!

Hindu neighbor gifts plot of land

Hindu neighbour gifts land to Muslim journalist

ಹೆಣ್ಮಕ್ಕಳೇ ನಿಮಗೊಂದು ಉಳಿತಾಯ ಮಾಡುವ ಟಿಪ್ಸ್‌ ಇಲ್ಲಿ ತಂದಿದ್ದೇವೆ. ಅಡುಗೆ ಅನಿಲ ಹೆಚ್ಚು ದಿನ ಬರುವುದಿಲ್ಲ ಎಂಬ ಚಿಂತೆ ಸದಾ ಮಹಿಳೆಯರಿಗೆ ಇದ್ದೇ ಇರುತ್ತದೆ. ಕೆಲವೊಂದು ಸಿಲಿಂಡರ್‌ ಒಂದು ತಿಂಗಳು, ಕೆಲವು ಒಂದು ತಿಂಗಳಿಗಿಂತ ಹೆಚ್ಚು, ಕೆಲವು ಬೇಗನೇ ಖಾಲಿಯಾಗುತ್ತದೆ.

ಇತ್ತೀಚೆಗೆ ಎಲ್ಲರೂ ಅಡುಗೆ ಅನಿಲದಿಂದಲೇ ಅಡುಗೆ ಮಾಡುವುದು ಹೆಚ್ಚು. ಹಾಗೆನೇ ಇವುಗಳ ಬೆಲೆ ಕೂಡಾ ಸಾಮಾನ್ಯ ವರ್ಗದ ಎಲ್ಲರಿಗೂ ತಲೆನೋವು ಎಂದೇ ಹೇಳಬಹುದು. ಈ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಅಡುಗೆ ಅನಿಲವನ್ನು ಉಳಿಸಲು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಂತಹ ಕೆಲವೊಂದು ಟಿಪ್ಸ್‌ ನಿಮಗಾಗಿ.

ಯಾವುದೇ ಭಕ್ಷ್ಯ ಬೇಯಿಸುವಾಗ ಮುಚ್ಚಿ ಬೇಯಿಸಲು ಪ್ರಯತ್ನಿಸಿ, ಆಗ ಶಾಖ ಆವಿಯಾಗದೇ, ಅನಿಲ ಉಳಿತಾಯವಾಗುತ್ತದೆ.
ಒದ್ದೆ ಪಾತ್ರೆಯಲ್ಲಿ ಅಡುಗೆ ಬೇಯಿಸಬೇಡಿ, ಅವು ಖಾದ್ಯ ಬಿಸಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ರೀತಿ ಮಾಡುವುದರಿಂದ ಅನಿಲ ಹೆಚ್ಚು ಖಾಲಿಯಾಗುತ್ತದೆ.
ಕಡಿಮೆ ಸಮಯದಲ್ಲಿ ಬೇಯಿಸಲು ನೀವು ಪ್ರೆಶರ್‌ ಕುಕ್ಕರ್‌ ಬಳಸಿ, ಅಗತ್ಯವಿದ್ದರೆ ರೈಸ್‌ ಕುಕ್ಕರ್‌ ಬಳಸಿ.
ಗ್ಯಾಸ್‌ ಬರ್ನರ್‌ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಬರ್ನರ್‌ನಿಂದ ನೀಲಿ ಜ್ವಾಲೆ ಬರುತ್ತಿದ್ದರೆ ಅದು ಸ್ವಚ್ಛವಾಗಿದೆ ಎಂದರ್ಥ. ಬರ್ನರ್‌ ಕೊಳಕಾಗಿದ್ದರೆ ಅನಿಲ ಹೆಚ್ಚು ಬಳಸುತ್ತಿದೆ ಎಂದರ್ಥ.
ತರಕಾರಿಗಳು ಬೇಗನೇ ಬೇಯಲು ಅವುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಇವು ತರಕಾರಿ ಬೇಗನೇ ಬೇಯಲು ಸಹಾಯ ಮಾಡುತ್ತದೆ. ಅನಿಲ ಉಳಿತಾಯವಾಗುತ್ತದೆ.