Home latest ‘ಪ್ರಸವ ವೇದನೆ’ ತಡೆಗೆ ಇನ್ನು ಮುಂದೆ ಲಾಫಿಂಗ್ ಗ್ಯಾಸ್ ಬಳಕೆ !

‘ಪ್ರಸವ ವೇದನೆ’ ತಡೆಗೆ ಇನ್ನು ಮುಂದೆ ಲಾಫಿಂಗ್ ಗ್ಯಾಸ್ ಬಳಕೆ !

Hindu neighbor gifts plot of land

Hindu neighbour gifts land to Muslim journalist

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದೆಂದರೆ ಅದೊಂದು ಮರುಹುಟ್ಟು ಆಕೆಗೆ ಅಂತಾನೇ ಹೇಳಬಹುದು. ಅಂತ ತಾಯಿಗೆ ಈ ಪ್ರಸವ ವೇದನೆ ಅನ್ನೋದು ನಿಜವಾಗಲೂ ಯಾತನಮಯ. ಆ ನೋವನ್ನು ಆಕೆಗೆ ತಡೆಯೋ ಶಕ್ತಿ ಇರಲ್ಲ. ಅದಕ್ಕಾಗಿಯೇ ಈ ನೋವನ್ನು ಆಕೆ ನಗು ಮೂಲಕ ಸ್ವಾಗತಿಸಲು ಇಲ್ಲೊಂದು ಆಸ್ಪತ್ರೆ ಹೊಸ ವಿಧಾನವನ್ನು ಅನುಸರಿಸಿದೆ.

ಹೌದು, ತೆಲಂಗಾಣದ ಸರ್ಕಾರಿ ಆಸ್ಪತ್ರೆಯಲ್ಲಿ ‘ಪ್ರಸವ ವೇದನೆ’ ತಡೆಗೆ ಲಾಫಿಂಗ್ ಗ್ಯಾಸ್ ಬಳಕೆ ಮಾಡುವ ಮೂಲಕ ಗರ್ಭಿಣಿಯರಿಗೆ ಒಂದಷ್ಟು ರಿಲೀಫ್ ನೀಡುತ್ತಿದೆ.

ಹೌದು, ಕಿಂಗ್ ಕೋಟಿ ಜಿಲ್ಲಾಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಯೋಗ ಮಾಡಲಾಗುತ್ತಿದ್ದು ಅದರಲ್ಲಿ ಯಶಸ್ವಿಯಾಗಿದೆ. ಡೆಲಿವರಿ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಲಾಫಿಂಗ್ ಗ್ಯಾಸ್ ಅಥವಾ Entonox (ನೈಟ್ರಸ್ ಆಕ್ಸೆಡ್ ಮತ್ತು ಆಕ್ಸಿಜನ್ ಮಿಶ್ರಣ) ನೀಡಲಾಗುತ್ತಿದ್ದು, ಇದರಿಂದಾಗಿ ಗರ್ಭಿಣಿಯರಿಗೆ ಕೊಂಚ ರಿಲೀಫ್ ಸಿಗುತ್ತದೆ ಎನ್ನಲಾಗಿದೆ.

ಈ ಕುರಿತಂತೆ ಮಾತನಾಡಿರುವ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾಕ್ಟರ್ ಜಲಜಾ ವೆರೋನಿಕಾ, ಯಾವ ಗರ್ಭಿಣಿ ಮಹಿಳೆಗೆ ಅತೀವ ವೇದನೆ ಇರುತ್ತದೋ ಅಂತವರಿಗೆ ಹೈದರಾಬಾದಿನ ಈ ಆಸ್ಪತ್ರೆಯಲ್ಲಿ ಲಾಫಿಂಗ್ ಗ್ಯಾಸ್ ನೀಡುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಡೆಲಿವರಿ ಸಂದರ್ಭದಲ್ಲಿ ಗರ್ಭಿಣಿಯರು ಆಕ್ಸಿಜನ್ ಮತ್ತು ಲಾಫಿಂಗ್ ಗ್ಯಾಸ್ ಮಿಶ್ರಣವಾದ ಇದನ್ನು ಸೇವಿಸಿದರೆ ಅವರಿಗೆ ವೇದನೆ ಕಡಿಮೆಯಾಗುತ್ತದೆ. ಈಗಾಗಲೇ 13ಕ್ಕೂ ಅಧಿಕ ಗರ್ಭಿಣಿ ಮಹಿಳೆಯರ ಮೇಲೆ ಈ ಪ್ರಯೋಗ ಮಾಡಿ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಆಸ್ಪತ್ರೆಗಳಲ್ಲೂ ಈ ವಿಧಾನವನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.