Home latest ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪತ್ರಕರ್ತೆಯ ಮೃತದೇಹ!! ಸಾವಿನ ಸುತ್ತ ಹಲವು ಅನುಮಾನ-ಪತಿಯ ವಿರುದ್ಧ ಪ್ರಕರಣ ದಾಖಲು

ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪತ್ರಕರ್ತೆಯ ಮೃತದೇಹ!! ಸಾವಿನ ಸುತ್ತ ಹಲವು ಅನುಮಾನ-ಪತಿಯ ವಿರುದ್ಧ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಾಸರಗೋಡು ಮೂಲದ ಪತ್ರಕರ್ತೆಯೊಬ್ಬರ ಸಾವಿನ ಹಿಂದೆ ಹಲವು ಅನುಮಾನ ಎದ್ದಿದ್ದು, ಸಮಗ್ರ ತನಿಖೆಗಾಗಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.ಮೃತ ಪತ್ರಕರ್ತೆಯನ್ನು ಶ್ರುತಿ ಎಂದು ಗುರುತಿಸಲಾಗಿದೆ.

2017 ರಲ್ಲಿ ಕಾಸರಗೋಡು ಸಮೀಪದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರನ್ನು ಮದುವೆಯಾಗಿದ್ದ ಪತ್ರಕರ್ತೆ ಶ್ರುತಿ, ಬಳಿಕ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿ, ರಾಯಿಟರ್ಸ್ ಎನ್ನುವ ಸುದ್ದಿ ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮದುವೆಯ ಬಳಿಕ ಪತಿಯಿಂದ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದ ಶ್ರುತಿ, ಒಂದಿಬ್ಬರಲ್ಲಿ ವಿಚಾರವನ್ನು ತಿಳಿಸಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇದೊಂದು ಕೊಲೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪತಿ ಅನಿಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.