Home latest ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಣೆ ಮಾಡಿದ ಯುವತಿಗೆದುರಾಯ್ತು ಬಿಜೆಪಿಯಿಂದ ಸಂಕಷ್ಟಗಳ ಸರಮಾಲೆ!!

ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಣೆ ಮಾಡಿದ ಯುವತಿಗೆದುರಾಯ್ತು ಬಿಜೆಪಿಯಿಂದ ಸಂಕಷ್ಟಗಳ ಸರಮಾಲೆ!!

Hindu neighbor gifts plot of land

Hindu neighbour gifts land to Muslim journalist

ಎಂತೆಂಥ ವಿಚಿತ್ರ ಮದುವೆಗಳನ್ನು ನೋಡಿರಬಹುದು ಜನರು. ಆದರೆ ಹುಡುಗಿ ಹುಡುಗಿಯನ್ನೇ ಮದುವೆಯಾಗುವುದು ಭಾರತದಲ್ಲಿ ಇದು ಮೊದಲು. ಈ ರೀತಿ ಹೇಳಿಕೆ ಕೊಟ್ಟ ಯುವತಿಗೆ ಈಗ ಎದುರಾಯ್ತು ಸವಾಲುಗಳ ಸರಮಾಲೆ.

ಇದನ್ನೂ ಓದಿ : ತನ್ನನ್ನು ತಾನೇ ವಿವಾಹವಾಗಲಿದ್ದಾಳೆ ಈ ಯುವತಿ

ಜೂನ್ 11ರಂದು ದೇವಸ್ಥಾನದಲ್ಲಿ ತನ್ನನ್ನೇ ತಾನು ಮದುವೆ ಆಗುವುದಾಗಿ ಹೇಳಿರುವ ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂದು ವಿರುದ್ಧ ವಡೋದರಾ ನಗರ ಘಟಕದ ಬಿಜೆಪಿ ಅಧ್ಯಕ್ಷೆ ಸುನಿತಾ ಶುಕ್ಲಾ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಸುನಿತಾ ಶುಕ್ಲಾ, ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರುದ್ಧ ಹಾಗಾಗಿ ಆಕೆ ದೇವಸ್ಥಾನದಲ್ಲಿ ಮದುವೆ ಆಗುವುದಾದರೆ, ನಾವು ಖಂಡಿತ ಅದಕ್ಕೆ ಅನುಮತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಿಂದು ಓರ್ವ ಮಾನಸಿಕ ಅಸ್ವಸ್ಥೆ. ಹೆಣ್ಣು ಹೆಣ್ಣನ್ನೇ ಹಾಗೂ ಗಂಡು ಗಂಡನ್ನೇ ಮದುವೆಯಾಗಬಹುದು ಅಂತಾ ಹಿಂದು ಸಂಸ್ಕೃತಿಯಲ್ಲಿ ಇಲ್ಲ. ಅವಳು ಬೇಕಾದರೆ ಮದುವೆಯಾಗಲಿ. ಆದರೆ, ಬಿಂದು ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ನನ್ನ ವಿರೋಧವಿದೆ. ಹಿಂದು ದೇವಸ್ಥಾನದಲ್ಲಿ ಆಕೆ ಆಕೆಯನ್ನೇ ಮದುವೆಯಾಗಲು ನಾವು ಬಿಡುವುದಿಲ್ಲ. ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರೋಧವಾಗಿದೆ. ಇದರಿಂದ ಹಿಂದು ಜನಸಂಖ್ಯೆ ಕುಂಠಿತವಾಗಲಿದೆ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ, ಯಾವುದೇ ಕಾನೂನು ಜಾರಿಯಾಗುವುದಿಲ್ಲ ಎಂದು ಸುನೀತಾ ಶುಕ್ಲಾ ಅಸಮಾಧಾನ ಹೊರಹಾಕಿದರು.