Home latest ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆ‌ಪೂಜೆ ಮಾಡಿಸಿದ ಪರಿಚಯಸ್ಥರು | ವೀಡಿಯೋ ವೈರಲ್

ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆ‌ಪೂಜೆ ಮಾಡಿಸಿದ ಪರಿಚಯಸ್ಥರು | ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಇದೆಂಥಾ ಕ್ರೌರ್ಯ. ಈಗಿನ ಕಾಲದಲ್ಲಿ ಕೂಡಾ ಈ ರೀತಿ ಆಗುತ್ತಿದೆ ಎಂದರೆ ನಂಬಲಸಾಧ್ಯ ಎಂದೇ ಹೇಳಬಹುದು. ಹೌದು, ಇಲ್ಲೊಂದು ಕಡೆ ಅಪ್ಪನ ಸಾಲ ತೀರಿಸುವುದಕ್ಕೆ ಮಗನಿಂದ ಬೆತ್ತಲೆ ಪೂಜೆ ಮಾಡಿಸಿರುವ ಘಟನೆಯೊಂದು ನಡೆದಿದೆ‌. ಈ ವಿಕೃತಿ ಮೆರೆದ ಘಟನೆ, ಅಷ್ಟೇ ಅಲ್ಲ ಅಮಾನವೀಯ ಪ್ರಕರಣ ಹುಬ್ಬಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬಡತನದಿಂದ ಬಳಲುತ್ತಿದ್ದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ದ್ರೋಹ ಮಾಡಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುತ್ತೇವೆಂದು ಅಪ್ರಾಪ್ತ ಬಾಲಕನಿಗೆ ನಂಬಿಸಿ ಬೆತ್ತಲೆ ಪೂಜೆ ಮಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿ ವಿಕೃತಿ ಮರೆದಿದ್ದಾರೆ.

16 ವರ್ಷದ ಪ್ರದೀಪ್ ಎಂಬಾತನೇ ಈ ರೀತಿಯ ಕ್ರೌರ್ಯಕ್ಕೆ ಒಳಗಾದವನು. ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ ಈ ಬಾಲಕ. ಶರಣಪ್ಪ, ಮರಿಗೌಡ, ಶರಣಪ್ಪ ತಳವರ್ ವಿಕೃತ ಮೆರೆದವರಾಗಿದ್ದಾರೆ. “ಅಪ್ಪನ ಸಾಲ ತೀರಬೇಕೆಂದರೆ ಬೆತ್ತಲೆ ಪೂಜೆ ಮಾಡಿದರೆ ದುಡ್ಡು ಬರುತ್ತದೆ. ಮತ್ತೆ ಸಾಲ ಕೂಡ ತೀರುತ್ತದೆ. ಬೆತ್ತಲೆ ಪೂಜೆ ಮಾಡಬೇಕು. ಇದರಿಂದ ಬಡತನ ನಿವಾರಣೆ ಆಗುತ್ತದೆ” ಎಂದು ಪ್ರದೀಪ್ ಅನ್ನು ಶರಣಪ್ಪ ಮತ್ತು ಗುಂಪು ಪುಸಲಾಯಿಸಿದ್ದಾರೆ.

ನಂತರ ರೂಮ್‍ನಲ್ಲಿ ಪ್ರದೀಪ್ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿ. ಇದನ್ನು ವೀಡಿಯೋ ಮಾಡಿ ಫೇಸ್‍ಬುಕ್, ವಾಟ್ಸಾಪ್ ಹಾಗೂ ಯೂಟ್ಯೂಬ್‍ಗಳಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ. ಇದರಿಂದಾಗಿ ನೊಂದ ಪ್ರದೀಪ್ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.