Home latest Kolar ಶ್ರೀರಾಮನ ಕಟೌಟ್ ಬ್ಲೇಡ್ ನಿಂದ ಹರಿದ ಕಿಡಿಗೇಡಿಗಳು: ಇಬ್ಬರ ಬಂಧನ!!

Kolar ಶ್ರೀರಾಮನ ಕಟೌಟ್ ಬ್ಲೇಡ್ ನಿಂದ ಹರಿದ ಕಿಡಿಗೇಡಿಗಳು: ಇಬ್ಬರ ಬಂಧನ!!

Hindu neighbor gifts plot of land

Hindu neighbour gifts land to Muslim journalist

Sri Rama Flex : ಅಯೋದ್ಯೆಯಲ್ಲಿ ಜ.22 ರಂದು ರಾಮಮಂದಿರ(Ayodhya Ram Mandir)ಉದ್ಘಾಟನೆ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಅಳವಡಿಸಿದ್ದ ಶ್ರೀರಾಮನ ಬ್ಯಾನರ್‌ (Sri Rama Flex)ಅನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ಮುಳಬಾಗಿಲು ಪಟ್ಟಣದ ಗುಣಿಗಂಟೆಪಾಳ್ಯದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

 

ವಿವಿಧ ಹಿಂದೂ ಸಂಘಟನೆಗಳಿಂದ ನಗರದಲ್ಲಿ ಅಳವಡಿಸಲಾಗಿದ್ದ ಶ್ರೀರಾಮನ ಬ್ಯಾನರ್ ಅನ್ನು ಕಿಡಿಗೇಡಿಗಳು ಬ್ಲೇಡ್ ನಿಂದ ಹರಿದು ಹಾಕಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಆಧರಿಸಿ ಪೋಲೀಸರು ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಜಹೀರ್ ಎಂದು ಗುರುತಿಸಲಾಗಿದೆ.

ಮಂಗಳವಾರ ತಡ ರಾತ್ರಿ ಶ್ರೀರಾಮನ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಕತ್ತರಿಸಿದ್ದಾರೆ ಎಂದು ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಸಂಸದ ಎಸ್.ಮುನಿಸ್ವಾಮಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬೆನ್ನಲ್ಲೇ ಮುಳಬಾಗಿಲು ಪಟ್ಟಣದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.