Home latest ಕೋಡಿ ಶ್ರೀಯಿಂದ ರಾಜಕೀಯದ ಕುರಿತು ಭಯಾನಕ ಭವಿಷ್ಯ!

ಕೋಡಿ ಶ್ರೀಯಿಂದ ರಾಜಕೀಯದ ಕುರಿತು ಭಯಾನಕ ಭವಿಷ್ಯ!

Hindu neighbor gifts plot of land

Hindu neighbour gifts land to Muslim journalist

ಚುನಾವಣೆಯ ಕಾವು ಗರಿಗೆದರುವ ಮೊದಲೇ ಕೋಡಿ ಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ರಾಜಕೀಯದ ಕುರಿತಂತೆ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಬಾಗಲಕೋಟೆಯಲ್ಲಿ ರಾಜಕೀಯ ಅಸ್ಥಿರತೆ ಇರುವ ಬಗ್ಗೆ ಮಾತನಾಡಿದ್ದು, ಚುನಾವಣೆವರೆಗೂ ಏನನ್ನು ಹೇಳಲು ಸಾಧ್ಯವಾಗದು. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಇದೀಗ, ರಾಜಕೀಯ ಹಣಾಹಣಿಯ ಬಗ್ಗೆ ಜನರಿಗಿದ್ದ ಕೌತುಕಕ್ಕೆ ತೆರೆ ಎಳೆಯಲು ಮುಂದಾಗಿರುವ ಶ್ರೀಗಳು ರೋಚಕ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದ್ದು, ಪಕ್ಷ ಗಳು ಒಡೆಯಲಿದ್ದು, ಚುನಾವಣೆ ನಡೆದರೂ ಕೂಡ ಪಕ್ಷಗಳಲ್ಲಿ ಬಿರುಕು ಮೂಡಿ ಒಡೆಯಲಿದೆ. ರಾಜಕೀಯದಲ್ಲಿ ಇನ್ನೂ ದಾಳಗಳಿವೆ ಎಂಬುದಾಗಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಇದಲ್ಲದೆ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಯುಗಾದಿ ಹಬ್ಬದ ಬಳಿಕ ರಾಜ್ಯದ ಸಿಎಂ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲವನ್ನು ಜನರಲ್ಲಿ ಹುಟ್ಟಿಸಿ ಈ ಗುಟ್ಟನ್ನು ಯುಗಾದಿ ವೇಳೆ ರಟ್ಟು ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.