Home latest A prisoner made a knife from a dinner plate: ಅಬ್ಬಾಬ್ಬಾ! ಊಟದ ತಟ್ಟೆಯಿಂದಲೇ...

A prisoner made a knife from a dinner plate: ಅಬ್ಬಾಬ್ಬಾ! ಊಟದ ತಟ್ಟೆಯಿಂದಲೇ ಚಾಕು ತಯಾರಿಸಿದ್ದ ಈ ಕತರ್ನಾಕ್ ಖೈದಿ!

Knife made from meal plate
Image source- British GQ

Hindu neighbor gifts plot of land

Hindu neighbour gifts land to Muslim journalist

CCB Raid: ವಿಧಾನಸಭೆ ಚುನಾವಣೆ(Karnataka Assembly election)ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಪೋಲಿಸರಿಂದ ದಾಳಿ ನಡೆಯುತ್ತಿದ್ದು, ಅಕ್ರಮಗಳನ್ನೆಲ್ಲ ಬಯಲಿಗೆಳೆಯುತ್ತಿದ್ದಾರೆ. ಅಂತೆಯೇ ನಿನ್ನೆ ದಿನ ಸೋಮವಾರ ಬೆಳಗ್ಗೆ ಪರಪ್ಪನ ಅಗ್ರಹಾರ(Central Jail) ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ(CCB raid) ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಪೋಲೀಸರಿಗೆ ಅಚ್ಚರಿಯಾಗುವಂತಹ ಸನ್ನಿವೇಶ ನಡೆದಿದೆ.

ಮತದಾನಕ್ಕೆ ಒಂದು ದಿನ ಬಾಕಿ ಇದ್ದು, ಈ ವೇಳೆ ಜೈಲಿನಿಂದ ಕರೆ ಮಾಡಿ ಬೆದರಿಕೆ ಹಾಕುವುದು, ಇಂಥವರಿಗೆ ಮತ ಹಾಕಿ ಎಂದು ಒತ್ತಡ ಹಾಕುವ ಶಂಕೆ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ನೇತೃತ್ವದಲ್ಲಿ ಇಬ್ಬರು ಡಿಸಿಪಿ ಹಾಗೂ ಸಿಸಿಬಿ ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಊಟದ ತಟ್ಟೆಯಿಂದ ತಯಾರಿಸಿದ್ದ ಚಾಕು ಮುಂತಾದ ಮಾರಕಾಸ್ತ್ರಗಳು ಈ ವೇಳೆ ಪತ್ತೆಯಾಗಿವೆ.

ಹೌದು, ದಾಳಿ ವೇಳೆ ಮೊಬೈಲ್(Mobile Phone) ಫೋನ್‌ಗಳು, ಅಲ್ಪ ಪ್ರಮಾಣದ ಡ್ರಗ್ಸ್ ಗಳು ಪತ್ತೆಯಾಗಿವೆ. ಆದರೆ ಇಲ್ಲೊಬ್ಬ ಖದೀಮ ಮಾತ್ರ ತಾನು ಊಟ ಮಾಡೋ ತಟ್ಟೆಯಿಂದಲೇ ಚಾಕು ಒಂದನ್ನು ತಯಾರಿಸಿಟ್ಟುಕೊಂಡಿದ್ದಾನೆ.

ಅಂದಹಾಗೆ ಪ್ರಮುಖವಾಗಿ ರೌಡಿಶೀಟರ್‌ಗಳು, ಕೊಲೆ ಆರೋಪಿಗಳು, ಇತರ ಅಪರಾಧ ಹಿನ್ನಲೆಯುಳ್ಳವರನ್ನು ವಿಚಾರಣೆ ಮಾಡಲಾಗಿದ್ದು, ವಿಚಾರಣಾಧೀನ ಕೈದಿಗಳು, ಶಿಕ್ಷೆಗೆ ಒಳಗಾಗಿರುವ ಖೈದಿಗಳ ಬ್ಯಾರಕ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ:The Kerala story : ಬಾಕ್ಸಾಫೀಸ್‌ನಲ್ಲಿ ಆರ್ಭಟಿಸುತ್ತಿದೆ ‘ದಿ ಕೇರಳ ಸ್ಟೋರಿ’! 3 ದಿನಕ್ಕೆ ಈ ವಿವಾದಾತ್ಮಕ ಚಿತ್ರ ಗಳಿಸಿದ್ದೆಷ್ಟು?