Home latest ದಿಢೀರನೆ ಶ್ರೀಮಂತರಾಗಲು ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ ಪ್ರಕರಣ : ದಂಪತಿ ಸಹಿತ ಮೂವರ ಬಂಧನ

ದಿಢೀರನೆ ಶ್ರೀಮಂತರಾಗಲು ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ ಪ್ರಕರಣ : ದಂಪತಿ ಸಹಿತ ಮೂವರ ಬಂಧನ

Hindu neighbor gifts plot of land

Hindu neighbour gifts land to Muslim journalist

ಶ್ರೀಮಂತಿಕೆಯ ಅಮಲು ಹಿಡಿದ ದಂಪತಿಗಳು ಮಾಟ ಮಂತ್ರ ಹಾಗೂ ನರಬಲಿಯ ಹಾದಿ ಹಿಡಿದು ಇಬ್ಬರು ಮಹಿಳೆಯರನ್ನು ಕೊಲೆ ಮಾಡಿರುವ ಘಟನೆಯೊಂದು ಬಹಿರಂಗಗೊಂಡಿದೆ.

ಇಬ್ಬರು ಮಹಿಳೆಯರು ಕೇರಳದಲ್ಲಿ ನಾಪತ್ತೆಯಾಗಿದ್ದರು.
ಅವರನ್ನು ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರಿಗೆ ಈ ಕೊಲೆ ಮಾಡಿ ಹೂತಿಟ್ಟಿರುವ ಹಾಗೂ ಭೀಕರ ಮಾಟಮಂತ್ರ ಹಾಗೂ ನರಬಲಿ ಪ್ರಕರಣವನ್ನು ಕಂಡು ಹಿಡಿದಿದ್ದಾರೆ. ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದ ಈ ದಂಪತಿ ಎರ್ನಾಕುಲಂ ಜಿಲ್ಲೆಯ ರೋಸೆಲಿನ್ ಹಾಗೂ ಪದ್ಮಾ ಅವರನ್ನು ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ದಂಪತಿ ಹಾಗೂ ಅವರ ಏಜೆಂಟ್ ನನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

50ರ ವಯಸ್ಸಿನ ರೋಸೆಲಿನ್ ಹಾಗೂ ಪದ್ಮಾ ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ರೋಸೆಲಿನ್ ಜೂನ್‌ನಲ್ಲಿ ನಾಪತ್ತೆಯಾಗಿದ್ದರೆ, ಪದ್ಮಾ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೋಸಲಿನ್ ಹಾಗೂ ಪದ್ಮಾ ಅವರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಸಾಜ್ ಥೆರಪಿಸ್ಟ್ ಭಗವಂತ್ ಸಿಂಗ್ ಹಾಗೂ ಆತನ ಪತ್ನಿ ಲೈಲಾ ಕೊಲೆ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೊಳಗಾದ ಮೂರನೇ ವ್ಯಕ್ತಿ ರಶೀದ್ ಮುಹಮ್ಮದ್ ಶಫಿ. ಈತನು ಈ ಕೊಲೆ ಅಪರಾಧದಲ್ಲಿ ದಂಪತಿಗೆ ಸಹಾಯ ಮಾಡಿದ್ದಾನೆ. ಈತನೇ ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.