Home latest Kerala Blast: ಕೇರಳ ಸ್ಫೋಟಕ್ಕೆ ರೋಚಕ ತಿರುವು!! ಇದರ ಹಿಂದಿರುವ ಮಾಸ್ಟರ್‌ ಮೈಂಡ್‌ ಯಾರು ಗೊತ್ತೇ?

Kerala Blast: ಕೇರಳ ಸ್ಫೋಟಕ್ಕೆ ರೋಚಕ ತಿರುವು!! ಇದರ ಹಿಂದಿರುವ ಮಾಸ್ಟರ್‌ ಮೈಂಡ್‌ ಯಾರು ಗೊತ್ತೇ?

Kerala Blast
Image source: the week

Hindu neighbor gifts plot of land

Hindu neighbour gifts land to Muslim journalist

Kerala Blast Dubai Connection: ಕೇರಳದ ಎರ್ನಾಕುಲಂನಲ್ಲಿ ಸಂಭವಿಸಿದ ಸ್ಫೋಟದಿಂದ ತತ್ತರಿಸಿರುವ ಜನತೆ, ಮೂರು ಬಾಂಬ್‌ ಸ್ಫೋಟಗಳ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಪೊಲೀಸರೆದುರು ಶರಣಾಗಿದ್ದು, ಇದೀಗ ಕೇರಳದಲ್ಲಿ ನಡೆದ ಈ ಸ್ಫೋಟದ (Kerala Blast) ಕುರಿತು ದುಬೈ ನಂಟು ಬೆಳಕಿಗೆ ಬಂದಿದೆ.

ಡೊಮಿನಿಕ್‌ ಮಾರ್ಟಿನ್‌ ಪೊಲೀಸರ ಮುಂದೆ ಶರಣಾಗಿದ್ದು, ನಾನೇ ಬಾಂಬ್‌ ಇಟ್ಟಿರುವುದಾಗಿ ಆರೋಪಿ ಹೇಳಿದ್ದಾನೆ. ಫೇಸ್‌ಬುಕ್‌ನಲ್ಲಿ ಲೈವ್‌ ಬರುವ ಮೂಲಕ ಸ್ಫೋಟದ ಹೊಣೆಯನ್ನು ಹೊತ್ತಿದ್ದು, ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೇರಳದಲ್ಲಿ ನಡೆದ ಸ್ಫೋಟಕ್ಕೆ ದುಬೈ ನಂಟು ಇದೆ ಎನ್ನುವ ಅಂಶ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಮಾರ್ಟಿನ್‌ ಎರಡು ತಿಂಗಳ ಹಿಂದೆ ದುಬೈನಿಂದ ಭಾರತಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಡೊಮಿನಿಕ್‌ ಹದಿನೈದು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಅಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದು, ನಂತರ ಭಾರತಕ್ಕೆ ಬಂದು ಟ್ಯೂಷನ್‌ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನಿಗೆ ಎರಡು ಮಕ್ಕಳಿದ್ದು ಅವರು ವಿದೇಶದಲ್ಲಿದ್ದಾರೆ.

ಡೊಮಿನಿಕ್‌ ಯಾರ ಜೊತೆ ಸಂಪರ್ಕದಲ್ಲಿದ್ದರು ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ. ತನಿಖಾ ಸಂಸ್ಥೆಗಳು ಈತನ ಹಿನ್ನೆಲೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಾರ್ಟಿನ್‌ ಕೇವಲ ದಾಳ, ಸ್ಫೋಟದ ಹಿಂದಿನ ಮಾಸ್ಟರ್‌ಮೈಂಡ್‌ ಯಾರು ಎಂದು ಪತ್ತೆ ಹಚ್ಚಲು ತನಿಖಾ ತಂಡ ಈ ನಿಟ್ಟಿನಲ್ಲಿ ತನಿಖೆ ಮಾಡುತ್ತದೆಯೇ ನೋಡಬೇಕು.

ಇದನ್ನೂ ಓದಿ: Anganawadi Recruitment: ಮಹಿಳೆಯರೇ ನಿಮಗೊಂದು ಗುಡ್‌ನ್ಯೂಸ್‌! ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ!!!