Home latest Shivamogga: ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ ಮಾಡಿದ ಬಿಜೆಪಿ ಕಾರ್ಯಕರ್ತರು! ಪೊಲೀಸರಿಂದ ಕಾರ್ಯಕರ್ತರಿಗೆ ಲಾಠಿ ರುಚಿ!

Shivamogga: ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ ಮಾಡಿದ ಬಿಜೆಪಿ ಕಾರ್ಯಕರ್ತರು! ಪೊಲೀಸರಿಂದ ಕಾರ್ಯಕರ್ತರಿಗೆ ಲಾಠಿ ರುಚಿ!

Shivamogga
Image source: Mescom karnataka

Hindu neighbor gifts plot of land

Hindu neighbour gifts land to Muslim journalist

Shivamogga: ಶಿವಮೊಗ್ಗದ (Shivamogga) ಮೆಸ್ಕಾಂ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ವಿದ್ಯುತ್ ದರ ಇಳಿಕೆ ಮಾಡುವಂತೆ ಪ್ರತಿಭಟನೆ ನಡೆಸಿದ್ದು, ಜೊತೆಗೆ ಮೆಸ್ಕಾಂ ಕಚೇರಿ ಮೇಲೆ ಕಲ್ಲು ಎಸೆದು ವಿಕೃತಿ ಮೆರೆದಿದ್ದಾರೆ.

ಸದ್ಯ ಬಿಜೆಪಿ ಕಾರ್ಯಕರ್ತರು ವಿದ್ಯುತ್ ದರ ಇಳಿಕೆ ಮಾಡುವಂತೆ ಇಂಧನ ಸಚಿವ ಕೆಜೆ ಜಾರ್ಜ್ ವಿರುದ್ಧ ಕೂಡ ಘೋಷಣೆ ಕೂಗುವ ಜೊತೆಗೆ, ಕಲ್ಲು ತೂರಿದ ಪರಿಣಾಮ ಮೆಸ್ಕಾಂ ಕಚೇರಿಯ ಕಿಟಕಿಯ ಗಾಜು ಪುಡಿ ಪುಡಿ ಆಗಿದ್ದು, ಸಿಬ್ಬಂದಿ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ಕೂಡ ನಡೆದಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು, ಲಾಠಿ ಚಾರ್ಜ್ ಮಾಡಿದ್ದು, ಕಲ್ಲು ಎಸೆದ ಬಿಜೆಪಿ ಕಾರ್ಯಕರ್ತ ಮುರುಗೇಶ್ ಅವರನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ: Gruha jyothi Scheme : ‘ಗೃಹಜ್ಯೋತಿ ಯೋಜನೆ’ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಿಕೆ ; ದಿನಾಂಕ ಗಮನಿಸಿ !