Home latest Anna Bhagya Yojana: ಅನ್ನ ಭಾಗ್ಯ ಯೋಜನೆಯ ಅಕ್ಕಿಯಲ್ಲಿ ಭಾರೀ ಕಡಿತ ?! ಏನಿದು...

Anna Bhagya Yojana: ಅನ್ನ ಭಾಗ್ಯ ಯೋಜನೆಯ ಅಕ್ಕಿಯಲ್ಲಿ ಭಾರೀ ಕಡಿತ ?! ಏನಿದು ಶಾಕಿಂಗ್ ನ್ಯೂಸ್- ಅಷ್ಟಕ್ಕೂ ಕಾರಣವೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Anna Bhagya Scheme:ರಾಜ್ಯ ಸರಕಾರದ(Government)ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ(Anna Bhagya Scheme) ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿಯ ಹಾಗೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ.ಪ್ರಸ್ತುತ, ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆ ಸರ್ಕಾರವು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಫಲಾನುಭವಿಗಳಿಗೆ ಹಣದ ನೆರವನ್ನು ನೀಡುತ್ತಿದೆ.

ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್‌ನಲ್ಲಿ ಭಾರಿ ಮಳೆ ಕೊರತೆ ಉಂಟಾಗಿದ್ದು, ಖಾರಿಫ್ 2023-24 ಋತುವಿನಲ್ಲಿ ಭತ್ತದ ಉತ್ಪಾದನೆಗೆ ಹೊಡೆತ ನೀಡುತ್ತಿದೆ. ಇದರಿಂದ ಅಕ್ಕಿ ಬೆಲೆ ಏರಲಿದ್ದು, ಸರ್ಕಾರದ ಅನ್ನಭಾಗ್ಯ ಯೋಜನೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. 2023 ರ ಖಾರಿಫ್‌ನಲ್ಲಿ ಭತ್ತದ ಬಿತ್ತನೆಯ ವಿಸ್ತೀರ್ಣವನ್ನು ಕರ್ನಾಟಕ ಸರ್ಕಾರವು 10.6 ಲಕ್ಷ ಹೆಕ್ಟೇರ್ ಎಂದು ಅಂದಾಜು ಮಾಡಲಾಗಿದೆ. ಆದರೆ ಅದು ಆಗಸ್ಟ್ ಅಂತ್ಯದ ವೇಳೆಗೆ ವಿಸ್ತೀರ್ಣವು ಕೇವಲ 6.7 ಲಕ್ಷ ಹೆಕ್ಟೇರ್ ಆಗಿದ್ದು, ವಾಡಿಕೆಗಿಂತ 37% ರಷ್ಟು ಕುಸಿತವನ್ನು ಕಂಡಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನೀಡುವ ತನ್ನ ಪ್ರಮುಖ ಅನ್ನಭಾಗ್ಯ ಯೋಜನೆಗೆ ಕರ್ನಾಟಕ ಸರ್ಕಾರವು ಸ್ಥಳೀಯವಾಗಿ ಅಕ್ಕಿಯನ್ನು ಸಂಗ್ರಹ ಮಾಡಲಾಗುತ್ತಿಲ್ಲ. ಇದರ ಬದಲಿಗೆ ಫಲಾನುಭವಿಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.ಈ ನಡುವೆ, ಭತ್ತದ ಬೆಲೆ ಏರಿಕೆಯ ಭೀತಿಯು ಯೋಜನೆಗೆ ದೊಡ್ಡ ಹೊಡೆತ ನೀಡಲಿದೆಯೇ ಎಂಬ ಕಳವಳ ವ್ಯಕ್ತವಾಗಿದೆ. ಛತ್ತೀಸ್‌ಗಢ, ಆಂಧ್ರಪ್ರದೇಶ, ಅಸ್ಸಾಂ ಮತ್ತು ಒಡಿಶಾದಂತಹ ಇತರ ಪ್ರಮುಖ ಉತ್ಪಾದಕ ರಾಜ್ಯಗಳು ಕಡಿಮೆ ವಿಸ್ತೀರ್ಣದಲ್ಲಿ ಭತ್ತದ ಬಿತ್ತನೆಯಯನ್ನು ಮಾಡಿದ್ದು, ಇದು ದೇಶದಲ್ಲಿ ಸಹಜವಾಗಿ ಅಕ್ಕಿಯ ಬೆಲೆಗಳಲ್ಲಿ ಏರಿಕೆ ಕಾಣಲು ಕಾರಣವಾಗಿದೆ.