Home latest New traffic Rules: ವಾಹನ ಸವಾರರೇ, ನಿಮ್ಮಲ್ಲಿ ಹಳೆ ವಾಹನಗಳಿದೆಯೇ? ಬಂದಿದೆ ಹೊಸ ರೂಲ್ಸ್‌, ನಿರ್ಲಕ್ಷ್ಯ...

New traffic Rules: ವಾಹನ ಸವಾರರೇ, ನಿಮ್ಮಲ್ಲಿ ಹಳೆ ವಾಹನಗಳಿದೆಯೇ? ಬಂದಿದೆ ಹೊಸ ರೂಲ್ಸ್‌, ನಿರ್ಲಕ್ಷ್ಯ ಮಾಡಿದರೆ ಬೀಳುತ್ತೆ ಭಾರೀ ದಂಡ!!

New traffic Rules
Image source: Retail Sensing

Hindu neighbor gifts plot of land

Hindu neighbour gifts land to Muslim journalist

New traffic Rules: ನಕಲಿ ನೋಂದಣಿ ಸಂಖ್ಯೆಯ ವಾಹನಗಳ ಬಳಕೆ ನಿಯಂತ್ರಿಸುವ ಸಲುವಾಗಿ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅತಿ ಸುರಕ್ಷಿತ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು, ಹಾಗೂ ಕರ್ನಾಟಕದ ಎಲ್ಲ ಹಳೆಯ ವಾಹನಗಳ ನಂಬರ್‌ಪ್ಲೇಟ್‌ ಬದಲಾಯಿಸಲು ರಾಷ್ಟ್ರೀಯ ಸುರಕ್ಷತೆ ಸಮಿತಿ ಸದಸ್ಯ ಡಾ. ಕಮಲಜಿತ್‌ ಸೋಯಿ ಹೇಳಿದ್ದಾರೆ (New traffic Rules).ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ಎಚ್‌ಎಸ್‌ಆರ್‌ಪಿ(ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್ಸ್‌) ಯೋಜನೆಯು ವಾಹನದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಮೂಲಕ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಅಲ್ಲದೇ ವಾಹನ ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 2019 ಏಪ್ರಿಲ್‌ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆಂದು ಮಾಧ್ಯಮವೊಂದು ಹೇಳಿದೆ.

ಆಂಧ್ರಪ್ರದೇಶ, ಸಿಕ್ಕಿಂ, ಉತ್ತರಪ್ರದೇಶ, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಹದಿನೆಂಟು ರಾಜ್ಯಗಳು ಎಚ್‌ಎಸ್‌ಆರ್‌ಪಿ ಕಡ್ಡಾಯ ಮಾಡಿದೆ. ಇದು ಈ ಹಿಂದೆಯೇ ಕಡ್ಡಾಯವಾಗಿತ್ತು. ಆದರೆ ಕರ್ನಾಟಕದ ಸಾರಿಗೆ ಇಲಾಖೆ ಆ.18, 2023 ರಂದು ಆದೇಶ ಹೊರಡಿಸಿದೆ. ಹಾಗೆನೇ ಹೊಸ ನಂಬರ್‌ ಪ್ಲೇಟ್‌ ಅಳವಡಿಕೆಗೆ ನ.17ರವರೆಗೆ ಕಾಲಾವಕಾಶವನ್ನು ನೀಡಿದೆ. ಇಷ್ಟುಮಾತ್ರವಲ್ಲದೇ, 500ರಿಂದ 1ಸಾವಿರ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ. ನಾಲ್ಕು ಚಕ್ರದ ವಾಹನಗಳಿಗೆ 400ರಿಂದ 500ರೂ.ಗಳವರೆಗೆ ಶುಲ್ಕವಿದೆ. ನಂಬರ್‌ ಪ್ಲೇಟ್‌ ಬದಲಾವಣೆಗೆ ವಾಹನದ ಮಾಲೀಕರು ಶೋ ರೂಂ, ಅಥವಾ ಡೀಲರ್‌ಗಳಲ್ಲಿ ಹೇಳಬಹುದು.

ನೀವೇನಾದರೂ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದಿದ್ದರೆ ವಿಮೆ ಅಪ್ಡೇಟ್‌, ಸಾಮರ್ಥ್ಯ ಅನುಮೋದನೆ, ವಿಳಾಸ ಬದಲಾವಣೆ, ಮಾಲೀಕತ್ವ ಬದಲಾವಣೆ ಇತ್ಯಾದಿ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ವಾಹನ ತಂತ್ರಾಂಶದಲ್ಲಿ ಮಾಲೀಕರ ಮಾಹಿತಿ ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಮಾಡಿಕೊಂಡ ಕೂಡಲೇ ಮಾಲೀಕರಿಗೆ ಲಭ್ಯವಾಗುತ್ತದೆ.

ಇದನ್ನೂ ಓದಿ: ಇಂಡಿಯಾ ಹೆಸರು ಬದಲಾವಣೆ ಕುರಿತು ಕೇಂದ್ರ ಸಚಿವರಿಂದ ಬಿಗ್‌ ಅಪ್ಡೇಟ್‌!! ಇಂಡಿಯಾ ಅಥವಾ ಭಾರತ ಯಾವುದು? ಒಲವು ಯಾವುದರ ಕಡೆ? ಏನಂದ್ರು ಸಚಿವರು?