Home latest Gruha Jyoti: ಬಾಡಿಗೆ ಮನೆಯಲ್ಲಿ ಇರೋರಿಗೆ ರಾಜ್ಯ ಸರಕಾರದಿಂದ ಗೃಹಜ್ಯೋತಿ ಯೋಜನೆ ಕುರಿತು ಸಿಹಿ...

Gruha Jyoti: ಬಾಡಿಗೆ ಮನೆಯಲ್ಲಿ ಇರೋರಿಗೆ ರಾಜ್ಯ ಸರಕಾರದಿಂದ ಗೃಹಜ್ಯೋತಿ ಯೋಜನೆ ಕುರಿತು ಸಿಹಿ ಸುದ್ದಿ

Hindu neighbor gifts plot of land

Hindu neighbour gifts land to Muslim journalist

Gruha Jyoti: ಕಾಂಗ್ರೆಸ್‌ ಸರಕಾರದ ಮಹತ್ತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ  ಗೃಹಜ್ಯೋತಿ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.  ಸೇವಾಸಿಂಧು ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯ ಕಲ್ಪಿಸುವ ಕುರಿತು ರಾಜ್ಯ ಸರಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು; ಹಾಗೂ 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.