Home latest Child Death: ಆಟವಾಡುತ್ತಿದ್ದ ಹಾಗೆ ಡೋರ್ ಲಾಕ್ ಆದ ಕಾರು, ಮೂವರು ಮಕ್ಕಳು ಉಸಿರು ಕಟ್ಟಿ...

Child Death: ಆಟವಾಡುತ್ತಿದ್ದ ಹಾಗೆ ಡೋರ್ ಲಾಕ್ ಆದ ಕಾರು, ಮೂವರು ಮಕ್ಕಳು ಉಸಿರು ಕಟ್ಟಿ ಸಾವು

Child Death
Image source: Vk news

Hindu neighbor gifts plot of land

Hindu neighbour gifts land to Muslim journalist

Child Death: ಮಕ್ಕಳು ಬೆಳೆಯುತ್ತಿದ್ದಂತೆ ಹೆತ್ತವರಿಗೆ ಅದೇನೋ ಖುಷಿ. ಆದರೆ ಕೆಲವೊಮ್ಮೆ ನಮ್ಮ ಪರಿಸ್ಥಿತಿ ಕೈ ಮೀರಿ ಹೋಗುತ್ತವೆ ಎನ್ನುವುದಕ್ಕೆ ಇದೇ ಉದಾಹರಣೆ ಆಗಿದೆ. ಸಾವಿರಾರು ಕನಸುಗಳನ್ನು ಹೊತ್ತ ತಂದೆ ತಾಯಿಯ ಮನಸ್ಸು ನುಚ್ಚು ನೂರಾಗಿದೆ. ಇನ್ನೇನು ಬಾಳಿ ಬದುಕಬೇಕಾದ ಮಕ್ಕಳನ್ನು ವಿಧಿ ವಶ ಮಾಡಿಕೊಂಡಿದೆ.

ಹೌದು, ನಾಗುರ್ ಜಿಲ್ಲೆಯ ಫಾರೂಖ್ ನಗರದಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ (Child Death) ಹೃದಯ ವಿದ್ರಾವಕ ಘಟನೆ ನಡೆದಿದೆ.

ಫಾರುಕ್ ನಗರದ ನಿವಾಸಿಗಳಾದ ತೌಫಿಕ್ ಫಿರೋಜ್ ಖಾನ್ (4), ಆಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಎಂಬ ಮೂವರು ಮಕ್ಕಳು ಆಟವಾಡಲು ಹೋಗಿದ್ದ ಬಳಿಕ ನಾಪತ್ತೆಯಾಗಿದ್ದರು.

ಮಕ್ಕಳ ಹುಡುಕಾಟದ ಸುಮಾರು 24 ಗಂಟೆಯ ಬಳಿಕ ಮನೆ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮೂರು ಮಕ್ಕಳ ಶವ ಪತ್ತೆಯಾಗಿದೆ. ಹಳೆಯ ಕಾರಿನಲ್ಲಿ ಆಟವಾಡುತ್ತಿದ್ದಾಗ ಡೋರ್ ಲಾಕ್ ಆಗಿ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿದ್ದಾರೆ. ಒಂದೇ ಮನೆಯ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಸದ್ಯ ಫಾರೂಖ್ ನಗರದ ಪಂಚಪಾವಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸದ್ಯ ಮಕ್ಕಳನ್ನು ಕಳೆದುಕೊಂಡ ಹೆತ್ತವರ ರೋದನೆ ಮುಗಿಲು ಮುಟ್ಟಿದೆ. ಏನೇ ಆಗಲಿ ಹೆತ್ತವರು ಕೆಲವೊಮ್ಮೆ ಬೇಜವಾಬ್ದಾರಿತನದ ವರ್ತನೆಯಿಂದ ಏನು ಅರಿಯದ ಜೀವಗಳು ಬಲಿಯಾಗುತ್ತಿದೆ.

ಇದನ್ನೂ ಓದಿ: Sprouted Wheat Benefits: ಮೊಳಕೆಯೊಡೆದ ಗೋಧಿ ಸೇವನೆಯಲ್ಲಿ ಅಡಗಿದೆ ಆರೋಗ್ಯದ ರಹಸ್ಯ! ಏನೆಲ್ಲಾ‌ ಪ್ರಯೋಜನವಿದೆ ಗೊತ್ತಾ?