Home latest ADITYA L1 LAUNCH: ಆದಿತ್ಯ L1 ಯಶಸ್ವಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಸ್ರೋ ಡೈರೆಕ್ಟರ್...

ADITYA L1 LAUNCH: ಆದಿತ್ಯ L1 ಯಶಸ್ವಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಪ್ರಾರ್ಥನೆ

Hindu neighbor gifts plot of land

Hindu neighbour gifts land to Muslim journalist

ADITYA L1 LAUNCH:  ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್೧ ಉಪಗ್ರಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಪ್ರಾರ್ಥನೆ ಸಲ್ಲಿಸಿದರು.

ಇದೇ ಸಂದರ್ಭ ಶ್ರೀ ದೇವಸ್ಥಾಮದ ಆಡಳಿತ ಮಂಡಳಿಯು ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿತು.

ಶುಕ್ರವಾರ ದೇವಳಕ್ಕೆ ಭೇಟಿ ನೀಡಿದ ಅವರು ಮಧ್ಯಾಹ್ನ ಮಹಾಪೂಜೆ ವೇಳೆಯಲ್ಲಿ ಇಸ್ರೋದಿಂದ ಸೂರ್ಯ ಗ್ರಹದ ಅಧ್ಯಯನಕ್ಕಾಗಿ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್೧ ಉಪಗ್ರಹವು ಯಾವುದೇ ತೊಂದರೆಗಳಿಲ್ಲದೆ ಉಡಾವಣೆಯಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂಧ್ಯಾ.ವಿ. ಶರ್ಮ ಅವರಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಸನ್ಮಾನಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.

ಅಲ್ಲದೆ ಚಂದ್ರಯಾನ 3 ಯಶಸ್ಸಿಗಾಗಿ ಶ್ರೀ ದೇವಳದಿಂದ ಅಭಿನಂದನಾ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.