Home latest IRCTC ಕರ್ನಾಟಕ ಟೂರ್ ಪ್ಯಾಕೇಜ್ ಬಿಡುಗಡೆ

IRCTC ಕರ್ನಾಟಕ ಟೂರ್ ಪ್ಯಾಕೇಜ್ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

IRCTC ಯಿಂದ ಮತ್ತೊಂದು ಹೊಸ ಪ್ರವಾಸ ಪ್ಯಾಕೇಜ್‌ ಬಿಡುಗಡೆಯಾಗಿದೆ. ಅದುವೇ ತಿರುಪತಿ ಟು ಕರ್ನಾಟಕ. ನಮ್ಮ ಕರ್ನಾಟಕದ ಸುಂದರವಾದ ಸ್ಥಳಗಳನ್ನು ನೋಡಬೇಕು ಎಂದು ತುದಿಗಾಲಿನಲ್ಲಿರುವವರಿಗೆ ಈ ಪ್ಯಾಕೇಜ್‌ ನಿಜಕ್ಕೂ ಅದ್ಭುತ. IRCTC ಮೂಲಕ ಅಗ್ಗದ ಬೆಲೆಯಲ್ಲಿ ಎಲ್ಲಾ ಸ್ಥಳಗಳನ್ನು ಸಂದರ್ಶಿಸಬಹುದು. ಅಷ್ಟಕ್ಕೂ ಯಾವೆಲ್ಲಾ ತಾಣಗಳನ್ನು ಈ ಪ್ಯಾಕೇಜ್‌ ಒಳಗೊಂಡಿದೆ. ಒಬ್ಬರಿಗೆ ಟಿಕೆಟ್ ಬೆಲೆ ಎಷ್ಟು? ಎಷ್ಟು ದಿನಗಳ ಪ್ರವಾಸ? ಏನೆಲ್ಲಾ ಸೌಲಭ್ಯಗಳು ಇರಲಿವೆ? ಎಂಬುದರ ಮಾಹಿತಿ ಇಲ್ಲಿದೆ.

ನಮ್ಮ ಕರ್ನಾಟಕದ ಜನಪ್ರಿಯ ಆಧ್ಯಾತ್ಮಿಕ ತಾಣಗಳಾದ, ಗೋಕರ್ಣ, ಕೊಲ್ಲೂರು, ಮುರುಡೇಶ್ವರ, ಶೃಂಗೇರಿ, ಉಡುಪಿಯಂತಹ ಸುಂದರ ತಾಣಗಳು ಪಟ್ಟಿಯಲ್ಲಿವೆ. ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ದೇವಾಲಯ, ಸೆಂಟ್‌ ಮೇರಿಸ್ ಐಲ್ಯಾಂಡ್, ಮಲ್ಪೆ ಬೀಚ್, ಶಾರದಾಂಬ ದೇವಾಲಯ, ಕೊಲ್ಲೂರು ಮುಕಾಂಬಿಕ ದೇವಿ ದೇವಾಲಯ, ಮುರುಡೇಶ್ವರ ದೇವಾಲಯ, ಜೋಗ ಜಲಪಾತ, ಗೋಕರ್ಣ, ಗೋಕರ್ಣ ಬೀಚ್, ಮಂಗಳೂರಿನ ದೇವಾಲಯಗಳು, ಕೋಟೆಗಳನ್ನು ನೋಡಿಕೊಂಡು ರಾತ್ರಿ ರೈಲಿನಲ್ಲಿ ಹಿಂದಿರುಗುವುದು.

ಅಂದ ಹಾಗೆ ಈ ಟೂರ್‌ ಪ್ಯಾಕೇಜ್‌ ಪ್ರವಾಸವು 2023 ರ ಜನವರಿ 17 ರಂದು ಪ್ರಾರಂಭವಾಗುತ್ತದೆ. ಹಾಗೆಯೇ ವಾರದ ಪ್ರತಿ ಮಂಗಳವಾರದಂದು ಈ ಪ್ಯಾಕೇಜ್‌ ಇರುತ್ತದೆ. ಈ ಪ್ಯಾಕೇಜ್‌ನ ಪ್ರಕಾರ 5 ರಾತ್ರಿ ಮತ್ತು 6 ದಿನಗಳ ದೀರ್ಘ ಪ್ರಯಾಣವಾಗಿರುತ್ತದೆ. ಇನ್ನು, ಈ ಪ್ಯಾಕೇಜ್‌ ಬುಕ್ ಮಾಡಲು ಪ್ರತಿ ವ್ಯಕ್ತಿಗೆ 33,280 ರೂಪಾಯಿಗಳು ವೆಚ್ಚವಾಗುತ್ತದೆ. ಒಂದು ವೇಳೆ ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ ಒಬ್ಬರಿಗೆ 18,570 ರೂಪಾಯಿಗಳು ವೆಚ್ಚವಾಗುತ್ತದೆ. ಇದು ಕಂಫರ್ಟ್ ಕ್ಲಾಸ್‌ ಟಿಕೆಟ್ ಬೆಲೆಯಾಗಿದೆ. ಸ್ಟಾಂಡರ್ಡ್ ಕ್ಲಾಸ್‌ನಲ್ಲಿ ಪ್ರಯಾಣಿಸಲು ನೀವು, ಪ್ರತಿ ವ್ಯಕ್ತಿಗೆ 30,890 ರೂಪಾಯಿಗಳು ವೆಚ್ಚವಾಗುತ್ತದೆ. ಒಂದು ವೇಳೆ ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ ಒಬ್ಬರಿಗೆ 16,180 ರೂಪಾಯಿಗಳು ವೆಚ್ಚವಾಗುತ್ತದೆ. 5 ರಿಂದ 11 ವರ್ಷದ ಮಕ್ಕಳಿಗೆ 7330 ರೂಪಾಯಿಗಳನ್ನು ನಿರ್ಧಾರವಾಗಿದೆ. ಈ ಪ್ಯಾಕೇಜ್‌ನಲ್ಲಿ ಊಟ, ವಸತಿ ಇದೆ.

ಹೆಚ್ಚಿನ ಮಾಹಿತಿಗಾಗಿ IRCTCಯ ಅಧಿಕೃತ ವೆಬ್‌ಸೈಟ್‌ಗೆ ಹೋಗುವ ಮೂಲಕ ತಿಳಿದುಕೊಳ್ಳಬಹುದು