Home latest HIV ಇದೆ ಎಂದು ಹೇಳದ ರೋಗಿಗೆ ಮನಸೋ ಇಚ್ಛೆ ಥಳಿಸಿದ ವೈದ್ಯ! ವೀಡಿಯೋ ವೈರಲ್‌, ಕೊನೆಗೇನಾಯ್ತು?

HIV ಇದೆ ಎಂದು ಹೇಳದ ರೋಗಿಗೆ ಮನಸೋ ಇಚ್ಛೆ ಥಳಿಸಿದ ವೈದ್ಯ! ವೀಡಿಯೋ ವೈರಲ್‌, ಕೊನೆಗೇನಾಯ್ತು?

Doctor Beats Patient

Hindu neighbor gifts plot of land

Hindu neighbour gifts land to Muslim journalist

Doctor Beats Patient: ಇಂದೋರ್‌ನ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ (ಎಂವೈಎಚ್) ಎಚ್‌ಐವಿ ರೋಗಿಯ ಮೇಲೆ ಹಲ್ಲೆ( Doctor Beats Patient) ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ತನಗೆ ಎಚ್‌ಐವಿ ಇದೆ ಎಂದು ರೋಗಿಯು ವೈದ್ಯರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಕೋಪಗೊಂಡ ವೈದ್ಯರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕಿರಿಯ ವೈದ್ಯರನ್ನು ಅಮಾನತುಗೊಳಿಸಲಾಯಿತು ಮತ್ತು ಈ ವಿಷಯದ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಯಿತು.

ಶನಿವಾರದಂದು ಉಜ್ಜಯಿನಿಯ ಯುವಕನೊಬ್ಬ ಕಾಲಿನ ಮೂಳೆ ಸಮಸ್ಯೆಗೆ ಚಿಕಿತ್ಸೆಗಾಗಿ ಎಂವೈಎಚ್‌ಗೆ ಬಂದಿದ್ದ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಈ 45 ವರ್ಷದ ರೋಗಿಯು ಎಚ್‌ಐವಿಯಿಂದ ಬಳಲುತ್ತಿದ್ದರು. ಆದರೆ ಅವರು ಈ ರೋಗದ ಬಗ್ಗೆ ವೈದ್ಯರಿಗೆ ತಿಳಿಸಲಿಲ್ಲ. ನಂತರ ವೈದ್ಯರಿಗೆ ಈ ವಿಷಯ ತಿಳಿದಾಗ ವೈದ್ಯ, ರೋಗಿ ಹಾಗೂ ಜತೆಗಿದ್ದ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಕಿರಿಯ ವೈದ್ಯರು ಸ್ಟ್ರೆಚರ್ ಮೇಲೆ ಮಲಗಿದ್ದ ರೋಗಿಯನ್ನು ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್‌ನಲ್ಲಿ ಇಡೀ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿದೆ. ಇದಾದ ನಂತರ MYH ಸೂಪರಿಂಟೆಂಡೆಂಟ್ ಪ್ರಮೇಂದ್ರ ಠಾಕೂರ್ ಅವರು ಈ ಕೃತ್ಯ ಎಸಗಿದ ವೈದ್ಯರನ್ನು ಅಮಾನತುಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೃತಕ ಗರ್ಭಧಾರಣೆಗೆ ತನ್ನದೇ ವೀರ್ಯ ಬಳಕೆ! 34 ವರ್ಷದ ಬಳಿಕ ಸಿಕ್ಕಿ ಬಿದ್ದ ವೈದ್ಯ!!! ಈ ಕೃತ್ಯ ಬಯಲಿಗೆ ಬಂದಿದ್ದು ಹೇಗೆ ಗೊತ್ತಾ?