Home Jobs ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ | ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ, ಒಟ್ಟು...

ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ | ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ, ಒಟ್ಟು 19 ಹುದ್ದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.29

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಅಂಚೆಯು ಕರ್ನಾಟಕ ವೃತ್ತದಲ್ಲಿ ನೇಮಕ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಉದ್ಯೋಗ ಸ್ಥಳ: ಕರ್ನಾಟಕ ಅಂಚೆ ವೃತ್ತ, ಬೆಂಗಳೂರು ಹುದ್ದೆ ಹೆಸರು : ಸಿಬ್ಬಂದಿ ಕಾರು ಚಾಲಕ ಹುದ್ದೆ
ಹುದ್ದೆ ಸಂಖ್ಯೆ : 19

ಜೆನೆರಲ್ ಕೆಟಗರಿ – 07, EWS – 02, ಪರಿಶಿಷ್ಟ ಜಾತಿ
04, ಪರಿಶಿಷ್ಟ ಪಂಗಡ – 01, ಒಬಿಸಿ – 05, ಮಾಜಿ ಸೈನಿಕ ಅಭ್ಯರ್ಥಿ – 02 ಹುದ್ದೆಗಳು ಮೀಸಲಾತಿ ಪ್ರಕಾರ
ವಿಂಗಡಣೆ ಮಾಡಲಾಗಿದೆ.

ವಯಸ್ಸಿನ ಅರ್ಹತೆ :  ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷ ವಯಸ್ಸು
ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷ ವಯೋಮಿತಿ ಸಡಿಲಿಕೆ
ನೀಡಲಾಗಿದೆ.

ವೇತನ ಶ್ರೇಣಿ : ರೂ.19,900 (ಲೆವೆಲ್-2, 7 ಸಿಪಿಸಿ
ಮೇ ಮೆಟ್ರಿಕ್)ಪ್ರೊಬೇಷನ್ ಅವಧಿ : ಎರಡು ವರ್ಷ.

ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆ-  ಲಘು ಮತ್ತು ಭಾರಿ ವಾಹನ ಚಾಲನೆ ಪರವಾನಗಿ (ಲೈಸೆನ್ಸ್) ಅಭ್ಯರ್ಥಿಗಳು ಹೊಂದಿರಬೇಕು. ಹಾಗೂ ಅಭ್ಯರ್ಥಿಗಳಿಗೆ
ಕನಿಷ್ಠ 3 ವರ್ಷ ಚಾಲನೆಯ ಅನುಭವ ಹೊಂದಿರಬೇಕು. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಕೆ ವಿಧಾನ ; ಅಭ್ಯರ್ಥಿಗಳು ನೋಟಿಫಿಕೇಶನ್ ಜೊತೆಗೆ ಅರ್ಜಿ ನಮೂನೆ ಇದೆ. ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಚಾಲನೆ ಹಾಗೂ ಮೊಟಾರು ಮೆಕ್ಯಾನಿಷಮ್ ಕುರಿತು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಥಿಯರಿ ಪರೀಕ್ಷೆಯ ಪಠ್ಯಕ್ರಮ, ದಿನಾಂಕ, ಪರೀಕ್ಷೆ ಮಾದರಿ ಕುರಿತು
ಪ್ರತ್ಯೇಕವಾಗಿ ಈ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ : The Manager, Mail Motor Service, Bengaluru-560001.

ಅರ್ಜಿ ಸ್ವೀಕಾರ ಮಾಡಲು ಕೊನೆ ದಿನಾಂಕ: 26-09 2022 ರ ಸಂಜೆ 05 ಗಂಟೆವರೆಗೆ.

ಅಭ್ಯರ್ಥಿಗಳು ಅರ್ಜಿಯ ಲಕೋಟೆ ಮೇಲೆ ‘ Application for the post of Driver (Direct Recruitment) at MMS Bengaluru’ ಎಂದು ಬರೆಯಬೇಕು.

ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.