Home Interesting ಕಾಂಡೋಂ ಬಳಕೆ ಹೆಚ್ಚಳ ಮಾಡಿದ ಯುವಕರು | ಲೈಂಗಿಕ ಸುರಕ್ಷತೆಗಲ್ಲ, ಯಾಕಾಗಿ ಗೊತ್ತೇ?

ಕಾಂಡೋಂ ಬಳಕೆ ಹೆಚ್ಚಳ ಮಾಡಿದ ಯುವಕರು | ಲೈಂಗಿಕ ಸುರಕ್ಷತೆಗಲ್ಲ, ಯಾಕಾಗಿ ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಲೈಂಗಿಕ ಸುರಕ್ಷತೆಗಾಗಿ ಹಾಗೂ ಜನಸಂಖ್ಯಾ ನಿಯಂತ್ರಣಕ್ಕಾಗಿ ಉಪಯೋಗಿಸುವ ಕಾಂಡೋಂನ್ನು ಈಗ ಬೇರೆ ರೀತಿಯ ಉಪಯೋಗಕ್ಕೆ ಬಳಸಲಾಗುವ ಒಂದು ಅಂಶ ಬೆಳಕಿಗೆ ಬಂದಿದೆ. ಹೌದು ಯುವಕರ ಒಂದು ವರ್ಗ ಕಾಂಡೋಮ್‌ಗಳ ದುಶ್ಚಟಕ್ಕೆ ಬಿದ್ದಿರುವ ಸತ್ಯಸಂಗತಿ ಹೊರಬಿದ್ದಿದೆ. ಸುವಾಸನೆ ಭರಿತ ಕಾಂಡೋಮ್‌ಗಳ ನೀರನ್ನು ಸೇವಿಸುವ ಈ ಯುವ ವರ್ಗ ಕಾಂಡೋಂನ ಪರಿಮಳದ ಮಾದಕತೆಯನ್ನು ಅನುಭವಿಸುತ್ತಿದ್ದಾರೆ.

ಲೈಂಗಿಕ ಸುರಕ್ಷತೆಗಾಗಿ ಬಳಸುವ ಕಾಂಡೋಮ್ ಗಳು ನಾನಾ ರೀತಿಯ ಸುವಾಸನೆಯೊಂದಿಗೆ ದೊರಕುತ್ತಿದೆ. ಸುರಕ್ಷತೆಗೆ ಇರುವ ಈ ಕಾಂಡೋಮ್‌ಗಳನ್ನು ಯುವ ಜನತೆ ದುರ್ಬಳಕೆ ಮಾಡತೊಡಗಿದ್ದಾರೆ. ಏಕೆಂದರೆ ಒಂದು ಸಮೀಕ್ಷೆಯ ಪ್ರಕಾರ, ಪರಿಮಳಯುಕ್ತ ಸುವಾಸೆ ಬೀರುವ ಈ ಕಾಂಡೋಮ್ ಗಳಿಗೆ ಇದ್ದಕ್ಕಿಂದ್ದಂತೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಏನು ಅಂದರೆ ಕಾಂಡೋಮ್‌ಗಳು ಮದ್ಯಪಾನದಷ್ಟೇ ಮಾದಕತೆ ತುಂಬಿದೆಯಂತೆ. ಇದನ್ನು ತಿಳಿದ ಯುವಕರು ಕಾಂಡೋಮ್‌ಗಳನ್ನು ಖರೀದಿಸುತ್ತಿದ್ದಾರೆ. ಅರೆ ಕಾಂಡೋಮ್‌ಗಳಿಂದ ಹೇಗೆ ಮಾದಕತೆ ಬರುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಧಾನನಗರ ಪ್ರದೇಶದಲ್ಲಿ ದುರ್ಗಾಪುರದ ಸಿಟಿ ಸೆಂಟರ್ ನಲ್ಲಿ ಇದ್ದಕ್ಕಿದ್ದಂತೆ ಸುವಾಸನೆಯ ಕಾಂಡೋಮ್‌ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಹೌದು, ಇಲ್ಲಿ ಕಾಂಡೋಮ್‌ಗಳನ್ನು ವಯಸ್ಕರು ಮಾತ್ರವಲ್ಲ ಸಣ್ಣ ಹುಡುಗರು, ಕಾಲೇಜು ವಿದ್ಯಾರ್ಥಿಗಳು, ಕಾಲೇಜ್ ಮುಗಿಸಿ ಕೆಲಸ ಹುಡುಕುತ್ತಿರುವ ಹಾಗೂ ಒಂಟಿಯಾಗಿರುವವರೇ ಖರೀದಿಸುತ್ತಿರುವುದು ಹೆಚ್ಚಾಗಿದೆಯಂತೆ. ಕಾಂಡೋಂ ಇಷ್ಟೊಂದು ಸೇಲ್ ಆಗೋದು ನೋಡಿ ಅಂಗಡಿ ಮಾಲೀಕನೇ ಕುತೂಹಲಗೊಂಡು ಯುವಕನೋರ್ವನಲ್ಲಿ ಕೇಳಿದಾಗ, ಆ ಯುವಕ ಕೊಟ್ಟ ಉತ್ತರ ನೋಡಿ ಮಾಲೀಕರು ದಂಗಾಗಿದ್ದಾರೆ. ಅಷ್ಟಕ್ಕೂ ಯುವಕ, “ನಾನು ಕಾಂಡೋಮ್‌ಗಳ ನೀರನ್ನು ಕುಡಿಯುತ್ತೇನೆ” ಎಂದು ಹೇಳಿದ್ದಾನೆ.

ಹೌದು, ಈ ದುರ್ಗಾಪುರದ ಊರಿನ ಯುವ ಸಮುದಾಯದ ಒಂದು ವರ್ಗ ಈಗ ಕಾಂಡೋಮ್‌ಗಳ ಚಟಕ್ಕೆ ಬಿದ್ದಿದೆ. ರಾತ್ರಿ ವೇಳೆ ಕಾಂಡೋಮ್ ಅನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ಮತ್ತು ಬರುತ್ತದೆಯಂತೆ. ಇದು ಆಶ್ಚರ್ಯಕರವೆಂದರೂ ಈ ರೀತಿಯಾಗಿ ನಡೆಯುತ್ತಿದೆ.

ಆ ಊರಿನ ಆಸ್ಪತ್ರೆಯ ಅಧೀಕ್ಷಕ ಧೀಮನ್ ಮಂಡಲ್ ಹೇಳುವ ಪ್ರಕಾರ, “ಕಾಂಡೋಮ್‌ಗಳು ಆರೊಮ್ಯಾಟಿಕ್ ಸಂಯುಕ್ತಗಳನ್ನು ಹೊಂದಿರುವುದರಿಂದ ಇದು ವ್ಯಸನಕ್ಕೆ ಹಾದಿ ಮಾಡಿಕೊಡುತ್ತದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್‌ಗಳಲ್ಲಿಯೂ ಕಂಡುಬರುತ್ತದೆ” ಎಂದು ಹೇಳಿದ್ದಾರೆ.

ದುರ್ಗಾಪುರದ ಕಾಲೇಜೊಂದರ ಹುಡುಗರಲ್ಲಿ ಈ ಕಾಂಡೋಮ್‌ಗಳನ್ನು ಖರೀದಿಸಲು ಕೋಡ್ ವರ್ಡ್ ಕೂಡ ಇದೆ. ಮೂಲತಃ ಆ ಕೋಡ್ ವರ್ಡ್ ನಗರ ಕೇಂದ್ರದಲ್ಲಿರುವ ಒಂದು ನಿರ್ದಿಷ್ಟ ಅಂಗಡಿಯಲ್ಲಿ ಚಾಲನೆಯಲ್ಲಿದೆ ಎಂದು ಅಂಗಡಿ ಮಾಲೀಕರ ಹೇಳಿಕೆ.