Home latest Hubballi:ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಮಹಾನಗರಪಾಲಿಕೆ! ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಸಮ್ಮತಿ!!!

Hubballi:ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಮಹಾನಗರಪಾಲಿಕೆ! ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಸಮ್ಮತಿ!!!

Ganesh chaturthi
Image source Credit: Tv 9

Hindu neighbor gifts plot of land

Hindu neighbour gifts land to Muslim journalist

Ganesh chaturthi: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಅವಧಿಗೆ ಗಣೇಶನ ಮೂರ್ತಿ (Ganesh Chaturthi) ಪ್ರತಿಷ್ಠಾಪನೆ ಮಾಡುವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ (Anjuman Islam) ಸಂಸ್ಥೆಯು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ ಪೀಠ ವಜಾ ಮಾಡಿದೆ.

ಮಹಾನಗರ ಪಾಲಿಕೆ ಕೂಡ ಆ. 31ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಲು ಚರ್ಚಿಸಿ ಠರಾವು ಪಾಸು ಮಾಡಿದ್ದು, ಈ ನಡುವೆ, ಪಾಲಿಕೆಯ ನಿರ್ಣಯ ಪ್ರಶ್ನಿಸಿ ಅಂಜುಮನ್‌ ಎ- ಇಸ್ಲಾಂ ಸಂಸ್ಥೆ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ, ಹೈಕೋರ್ಟ್‌‌ನಲ್ಲಿ ಅಂಜುಮನ್‌ ಸಂಸ್ಥೆಯ ಅರ್ಜಿ ವಜಾಗೊಂಡಿತ್ತು.

ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಮಹಾನಗರಪಾಲಿಕೆ ಕೊನೆಗೆ ಇಲ್ಲಿನ ಈದ್ಗಾ ಮೈದಾನ (ರಾಣಿ ಚೆನ್ನಮ್ಮ ಮೈದಾನ)ದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಈ ಮೂಲಕ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡುವುದು ಪಾಲಿಕೆಗೆ ಬಿಟ್ಟಂತಾಗಿದೆ. ಶುಕ್ರವಾರ ರಾತ್ರಿ ಸೆ.19ರಿಂದ 3 ದಿನಗಳ ಕಾಲ ಗಣೇಶೋತ್ಸವ ಆಚರಿಸುವುದಕ್ಕೆ 18 ಷರತ್ತುಗಳನ್ನು ವಿಧಿಸಿ ಅನುಮತಿಯನ್ನು ನೀಡಲಾಗಿದ್ದು, ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ : Rahul Gandhi: ರಾಹುಲ್ ಗಾಂಧಿ ವಿರುದ್ಧ ಮತ್ತೆ ಹರಿಹಾಯ್ದ ಹಿಮಂತ ಬಿಸ್ವಾ: ಪ್ರಧಾನಿಯಾಗಲು ಚಂದ್ರ ಗ್ರಹದಲ್ಲಿ ಪ್ರಯತ್ನಿಸಲು ಸಲಹೆ!