Home latest HSRP Number Plate: ಎಚ್‌ಎಸ್‌ಆರ್‌ಪಿ ಪ್ಲೇಟ್‌ ಹಾಕಿಸಲು ಮಾಲೀಕರ ನಿರಾಸಕ್ತಿ!!!

HSRP Number Plate: ಎಚ್‌ಎಸ್‌ಆರ್‌ಪಿ ಪ್ಲೇಟ್‌ ಹಾಕಿಸಲು ಮಾಲೀಕರ ನಿರಾಸಕ್ತಿ!!!

Hindu neighbor gifts plot of land

Hindu neighbour gifts land to Muslim journalist

HSRP: ರಾಜ್ಯದಲ್ಲಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳನ್ನು ಹಾಕಿಸಿಕೊಳ್ಳುವ ಸಮಯ ಇನ್ನು ಒಂದು ವಾರದಲ್ಲೇ ಪೂರ್ಣವಾಗುತ್ತದೆ. ಇಲ್ಲಿಯವರೆಗೂ ಶೇ 10 ರಷ್ಟು ಮಾತ್ರ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳ ಅಳವಡಿಕೆ ಹಾಕಿದೆ.

ರಾಜ್ಯದಲ್ಲಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳನ್ನು ಹಾಕಿಸಿಕೊಳ್ಳುವ ಸಮಯ ಇನ್ನು ಒಂದು ವಾರದಲ್ಲೇ ಪೂರ್ಣವಾಗುತ್ತದೆ. ಇಲ್ಲಿಯವರೆಗೂ ಶೇ 10 ರಷ್ಟು ಮಾತ್ರ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳ ಅಳವಡಿಕೆ ಹಾಕಿದೆ. ಏಕರೂಪ ನೋಂದಣಿ ಫಲಕ ಅಳವಡಿಕೆಯ ಜೊತೆಗೆ ವಾಹನಗಳ ಸುರಕ್ಷತೆ ಮತ್ತು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕಾರಣದಿಂದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ಇಲಾಖೆಯು ಕಡ್ಡಾಯಗೊಳಿಸಲಾಗಿದೆ.

2019 ರ ನಂತರ ನೋಂದಣಿಯಾದ ಎಲ್ಲ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಪ್ಲೇಟ್ ಅನ್ನು ಅಳವಡಿಸಲು ತಿಳಿಸಲಾಗಿದೆ. ಇದಕ್ಕಿಂತ ಮುಂಚೆ ರಿಜಿಸ್ಟರ್ ಆಗಿರುವ ವಾಹನಗಳು ಈ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ತಿಳಿಸಿಲ್ಲ. ಈಗ 2019 ರ ಮೊದಲು ನೋಂದಣಿಯಾಗಿರುವ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಪ್ಲೇಟ್ ಅನ್ನು ಹಾಕಿಸುವುದು ಕಡ್ಡಾಯ ಮಾಡಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆಗೆ 2023ರ ನ. 17 ನ್ನು ಅಂತಿಮ ಗಡುವು ನೀಡಿದೆ.

ಸಾರಿಗೆ ಇಲಾಖೆಯ ವರದಿಯಂತೆ ಇನ್ನೂ ಎರಡು ಕೋಟಿಗೂ ಅಧಿಕ ವಾಹನಗಳು ಎಚ್‌ಎಸ್‌ಆರ್‌ಪಿ ಪ್ಲೇಟ್ ಅನ್ನು ಹಾಕಿಸಿಕೊಳ್ಳಬೇಕಿದೆ. 2023ರ ನ. 17ರವರೆಗೆ ಕೇವಲ 40 ಸಾವಿರ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿದ್ದವು. ಈಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದರೂ ಇನ್ನೂ ಎಚ್‌ಎಸ್‌ಆರ್‌ಪಿ ಅನ್ನು ಹಾಕಿಕೊಂಡಿಲ್ಲ.

ಮತ್ತೆ ಗಡುವು ವಿಸ್ತರಣೆ ಅಥವಾ ದಂಡ ವಿಧಿಸುವ ಸಾಧ್ಯತೆ. ಎಚ್‌ಎಸ್‌ಆರ್‌ಪಿ ಹಾಕಲು ನೀಡಿರುವ ಗಡುವು ಇನ್ನು ಒಂದು ವಾರದಲ್ಲೇ ಮುಗಿಯಲಿದೆ. ಆದರೆ ಇನ್ನೂ ಬಹಳ ಮಂದಿ ಇದನ್ನು ಅಳವಡಿಸಿಕೊಂಡಿಲ್ಲ. ಒಂದು ವೇಳೆ ಗಡುವು ವಿಸ್ತರಿಸಿದರೆ ದಂಡ ಇರುವುದಿಲ್ಲ. ವಿಸ್ತರಿಸದೆ ಇದ್ದರೆ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.ವಾಹನಗಳಿಗೆ 1 ಸಾವಿರ ರು.ನಿಂದ 2 ಸಾವಿರ ರು.ವರೆಗೆ ದಂಡ ವಿಧಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.