Home International ಆಸ್ಪತ್ರೆಯಲ್ಲಿ ಸಣ್ಣಗೆ ಅತ್ತಿದ್ದಕ್ಕೆ 3100 ರೂಪಾಯಿ ಬಿಲ್ ಹಾಕಿದ ಆಸ್ಪತ್ರೆ!

ಆಸ್ಪತ್ರೆಯಲ್ಲಿ ಸಣ್ಣಗೆ ಅತ್ತಿದ್ದಕ್ಕೆ 3100 ರೂಪಾಯಿ ಬಿಲ್ ಹಾಕಿದ ಆಸ್ಪತ್ರೆ!

Hindu neighbor gifts plot of land

Hindu neighbour gifts land to Muslim journalist

ಆಸ್ಪತ್ರೆ ಮೆಟ್ಟಿಲು ಹತ್ತಬೇಕೆಂಬ ಆಸೆ ಯಾರಿಗೂ ಇಲ್ಲ. ಆದರೆ ಅನಿವಾರ್ಯ ಸಂದರ್ಭ ಬಂದಾಗ ಆಸ್ಪತ್ರೆ ಬಾಗಿಲು ತಟ್ಟಲೇ ಬೇಕು. ಆಸ್ಪತ್ರೆ ಅಂದರೆ ದುಡ್ಡು ಖರ್ಚು ಜಾಸ್ತಿ. ಹಾಗಾಗಿ ಆಸ್ಪತ್ರೆ ಮೆಟ್ಟಿಲು ಹತ್ತಬೇಕೆಂದರೆ ಹತ್ತು ಬಾರಿ ಯೋಚನೆ ಮಾಡಬೇಕು. ಪರ್ಸ್ ನಲ್ಲಿ ದುಡ್ಡಿದೆಯಾ ಅಂತ! ಇಲ್ಲದಿದ್ದರೆ ಈ ರೋಗಿಗೆ ಆದ ಪರಿಸ್ಥಿತಿ ನಿಮಗೂ ಬರಬಹುದು.

ಆಸ್ಪತ್ರೆಗಳಲ್ಲಿ ಸಣ್ಣ ಪುಟ್ಟ ಟೆಸ್ಟ್‌ಗೂ ಸಾವಿರಾರು ರೂ. ಬಿಲ್ ಮಾಡುವವರಿದ್ದಾರೆ. ಇಲ್ಲೊಬ್ಬರು ಅಮೆರಿಕದ ವೈದ್ಯರು ತನ್ನ ರೋಗಿಯೊಬ್ಬಳಿಗೆ ಅತ್ತಿದ್ದಕ್ಕೂ ಬಿಲ್ ಮಾಡಿದ್ದಾರೆ. ರೋಗಿ ಅತ್ತಿದ್ದಾಳೆ ಎಂಬ ಕಾರಣಕ್ಕೆ ಸುಮಾರು 3,100 ರೂ. ಬಿಲ್ ಮಾಡಿದ್ದಾರೆ. ಈ ಬಿಲ್ ನ ರಶೀದಿ ಇದೀಗ ಭಾರೀ ವೈರಲ್ ಆಗಿದೆ.

ಅಮೆರಿಕಾದ ವೈದ್ಯರ ಬಿಲ್ ನಲ್ಲಿ “ಅತ್ತಿದ್ದಕ್ಕಾಗಿ” ತನ್ನ ಸಹೋದರಿಗೆ ಸುಮಾರು 3,100
ರೂ. ವಿಧಿಸಲಾಗಿದೆ ಎಂದು ಅಮೆರಿಕಾದ ಮಹಿಳೆಯೊಬ್ಬರು ಬಿಲ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾಗ, ಡಾಕ್ಟರ್ ಮುಂದೆ ಆಕೆ ಭಾವುಕಳಾಗಿ ಕಣ್ಣೀರು ಹಾಕಿದ್ದಾಳೆ. ಆದರೆ ವೈದ್ಯರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ರೋಗಿಗೆ ಯಾವುದೇ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡದೇ ಹೆಚ್ಚುವರಿ ಶುಲ್ಕ ವಿಧಿಸಿದ್ದಾರೆ ಎಂದು ಸಹೋದರಿ ಕ್ಯಾಮಿಲಿ ಕಿಡಿಕಾರಿದ್ದಾರೆ.

ರೋಗಿಗಳಿಗೆ ಆರೋಗ್ಯ ಸೇವೆ ನೀಡುವ ಮುನ್ನ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅವರನ್ನು ಭಾವುಕರನ್ನಾಗಿ ಮಾಡಿ ಹೆಚ್ಚುವರಿ ಬಿಲ್ ವಿಧಿಸುವುದೇ ಇಲ್ಲಿನ ವೈದ್ಯರ ಕೆಲಸವಾಗಿ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲೇ ಕಂಗೆಟ್ಟು ಆಸ್ಪತ್ರೆಗೆ ಬರುವ ರೋಗಿಗಳಿಗೆ ಈ ರೀತಿಯ ಬಿಲ್ ಅಂತ ಹಾಕಿ, ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಉದ್ಧಟತನ ತೋರಿಸುವ ವೈದ್ಯರಿಗೆ ಏನೆನ್ನಬೇಕು? ನೀವೇ ಹೇಳಿ.