Home latest Hindu Temple: ಅಯೋಧ್ಯೆಯ ಸಂಭ್ರಮದಲ್ಲೇ ಶಾಕಿಂಗ್‌ ನ್ಯೂಸ್‌!!! ರಾಮನ ವಿಗ್ರಹ ಧ್ವಂಸ ಮಾಡಿದ ಕಿಡಿಗೇಡಿಗಳು!!!

Hindu Temple: ಅಯೋಧ್ಯೆಯ ಸಂಭ್ರಮದಲ್ಲೇ ಶಾಕಿಂಗ್‌ ನ್ಯೂಸ್‌!!! ರಾಮನ ವಿಗ್ರಹ ಧ್ವಂಸ ಮಾಡಿದ ಕಿಡಿಗೇಡಿಗಳು!!!

Hindu neighbor gifts plot of land

Hindu neighbour gifts land to Muslim journalist

Hindu Temple: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿದೆ. ಆದರೆ ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ದುರ್ಗ ಮಂದಿರವೊಂದರಲ್ಲಿ ಶ್ರೀರಾಮ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

ಇಲ್ಲಿನ ದುರ್ಗಾ ಮಂದಿರವೊಂದರಲ್ಲಿ ರಾಮನ ವಿಗ್ರಹವೊಂದು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಲ್ಲಿಗೆ ಬಂದ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ಈ ಘಟನೆ ಬೆಳಕಿಗೆ ಬಂದಿದ್ದು, ಶಹಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಶ್ರೀರಾಮನ ವಿರೂಪಗೊಂಡ ಪ್ರತಿಮೆ ಕಾಣಿಸಿದೆ. ಇದನ್ನು ಕಂಡ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಪ್ರತಿಭಟನೆಯಲ್ಲಿ ಸ್ಥಳೀಯ ರಾಜಕೀಯ ನಾಯಕರು ಕೂಡಾ ಭಾಗಿಯಾಗಿದ್ದರು.

ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಗಲಾಟೆ ನಡೆಯದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.