Home latest ‘ಮೊಲೆ ಚಿಕ್ಕದಾಗಿದ್ದರೂ ಮುಟ್ಟಿದ್ದು ಮುಟ್ಟಿದ್ದೇ ‘ | ಚಿಕ್ಕ ಎದೆಯ ಹುಡುಗಿಯ ಕೇಸಲ್ಲಿ ಕೋರ್ಟ್ ಏನಂತು...

‘ಮೊಲೆ ಚಿಕ್ಕದಾಗಿದ್ದರೂ ಮುಟ್ಟಿದ್ದು ಮುಟ್ಟಿದ್ದೇ ‘ | ಚಿಕ್ಕ ಎದೆಯ ಹುಡುಗಿಯ ಕೇಸಲ್ಲಿ ಕೋರ್ಟ್ ಏನಂತು ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

ಬಾಲಕಿಯ ಮೊಲೆಗಳು ಪ್ರಭುದ್ಧವಾಗಿ ರೂಪುಗೊಳ್ಳದೆ ಹೋದರೂ, ಲೈಂಗಿಕ‌ ಉದ್ದೇಶದಿಂದ ಅದನ್ನು ಸ್ಪರ್ಶಿಸಿದರೆ, ಅದು ಲೈಂಗಿಕ ದೌರ್ಜನ್ಯ ಎಂದೇ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ತೀರ್ಪೊಂದನ್ನು ನೀಡಿದೆ. ‘ಮೊಲೆಗಳು ಚಿಕ್ಕದಾಗಿದ್ದರೂ, ಅದನ್ನು ಮುಟ್ಟಿದ್ದು ಮುಟ್ಟಿದ್ದೇ’, ಅದು ಲೈಂಗಿಕ ದೌರ್ಜನ್ಯವೇ ಎಂದು ಕೋರ್ಟು ತೀರ್ಪು ನೀಡಿದೆ. ಚಿಕ್ಕದು, ದೊಡ್ಡದು ಎಂಬ ಪ್ರಶ್ನೆ ಬರಲ್ಲ, ಆ ಎದೆಯ ಸ್ತನಗಳು ಮೂಡುವ ಜಾಗಕ್ಕೆ ಕೈ ಸವರಿದರೆ, ಅದು ಲೈಂಗಿಕ ದೌರ್ಜನ್ಯ ದಿಟ ಎಂದಿದೆ ಕೋರ್ಟು.

ಬಾಲಕಿಯ ಸ್ತನಗಳು ಪ್ರೌಡಾವಸ್ಥೆ ತಲುಪದಿದ್ದರೂ ಸಹ, ಆರೋಪಿಯು ನಿರ್ದಿಷ್ಟ ಲೈಂಗಿಕ ಉದ್ದೇಶವನ್ನೇ ಇಟ್ಟುಕೊಂಡು ಆಕೆಯ ಎದೆಯನ್ನು ಸ್ಪರ್ಶ ಮಾಡಿದರೆ ಅದು ಲೈಂಗಿಕ ದೌರ್ಜನ್ಯವೆಂದೇ ಪರಿಗಣಿಸಲಾಗುತ್ತದೆ. ಮಹಿಳೆಯೊಬ್ಬರು 2017ರಲ್ಲಿ ತಮ್ಮ 13 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಈ ಸಂಬಂಧ ಕೊಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಯಾರೂ ಇಲ್ಲದ ವೇಳೆಯಲ್ಲಿ ಬಾಲಕಿಯ ಮನೆಗೆ ನುಗ್ಗಿದ ಆರೋಪಿಯು ಅಪ್ರಾಪ್ತೆಯ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಆಕೆಗೆ ಮುತ್ತಿಕ್ಕಿದ್ದ ಎಂದು ಆರೋಪಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವೇಳೆಯಲ್ಲಿ ಸಂತ್ರಸ್ತೆಯ ಸ್ತನಗಳು ರೂಪುಗೊಂಡಿಲ್ಲ ಎಂದು ಸಾಕ್ಷ್ಯ ನೀಡಲಾಗಿತ್ತು. ಆರೋಪಿ ಪರ ವಾದ ಮಂಡಿಸಿ, ಆಕೆಯ ಮೊಲೆಗಳು ಸರಿಯಾಗಿ ಬಲಿತಿರಲಿಲ್ಲ, ಹಾಗಾಗಿ ಯಾಕಾಗಿ ಎದೆಯನ್ನು ಮುಟ್ಟುತ್ತಾರೆ ? ಇದು ಲೈಂಗಿಕ ದೌರ್ಜನ್ಯ ಆಗಿರುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಮೂರ್ತಿ ಬಿವೇಕ್ ಚೌಧರಿ ಈ ಪ್ರಕರಣದಲ್ಲಿ 13 ವರ್ಷದ ಬಾಲಕಿಯ ಸ್ತನ ಪ್ರೌಡಾವಸ್ತೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದು ಇಲ್ಲಿ ಸಂಪೂರ್ಣವಾಗಿ ಅಪ್ರಸ್ತುತವಾಗಿದೆ ಎಂದು ಹೇಳಿದ್ದಾರೆ.

13 ವರ್ಷ ವಯಸ್ಸಿನ ಹುಡುಗಿಯ ದೇಹದ ನಿರ್ದಿಷ್ಟ ಭಾಗವನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 7 ರ ಉದ್ದೇಶಕ್ಕಾಗಿ ಸ್ತನ ಎಂದು ಕರೆಯಲಾಗುತ್ತದೆ, ಕೆಲವು ವೈದ್ಯಕೀಯ ಕಾರಣಗಳಿಂದಾಗಿ ಆಕೆಯ ಸ್ತನಗಳು ಬೆಳವಣಿಗೆಯಾಗದಿದ್ದರೂ ಸಹ, ಮಗುವಿನ ಯೋನಿ, ಶಿಶ್ನ, ಗುದದ್ವಾರ ಅಥವಾ ಸ್ತನಗಳನ್ನು ಸ್ಪರ್ಶಿಸುವುದು ಅಥವಾ ಲೈಂಗಿಕ ಉದ್ದೇಶದಿಂದ ಆರೋಪಿಯಂತೆಯೇ ಅವರನ್ನು ಮುಟ್ಟುವಂತೆ ಮಾಡುವುದು ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆ ದೈಹಿಕ ಸಂಪರ್ಕವನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ಐಪಿಸಿ ಸೆಕ್ಷನ್ 448. IPC ಯ ಸೆಕ್ಷನ್ 448/354 ಮತ್ತು POCSO ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಕೋರ್ಟ್ ಘೋಷಿಸಿದೆ.