Home latest Gruhalakshmi Guarantee Scheme: ಯಜಮಾನಿಯರೇ, ಗೃಹಲಕ್ಷ್ಮೀಯ 2ನೇ ಕಂತಿನ ಹಣ ಬರೋದು ಯಾವಾಗ ?! ಇಲ್ಲಿದೆ...

Gruhalakshmi Guarantee Scheme: ಯಜಮಾನಿಯರೇ, ಗೃಹಲಕ್ಷ್ಮೀಯ 2ನೇ ಕಂತಿನ ಹಣ ಬರೋದು ಯಾವಾಗ ?! ಇಲ್ಲಿದೆ ನೋಡಿ ಡೀಟೇಲ್ಸ್

Gruhalakshmi Scheme money
Image source Credit: Vistara News

Hindu neighbor gifts plot of land

Hindu neighbour gifts land to Muslim journalist

Gruhalakshmi Scheme money : ಕಾಂಗ್ರೆಸ್ ನ (Congress)ಈ ಐದು ಗ್ಯಾರೆಂಟಿಗಳ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruhalakshmi Guarantee Scheme)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ.

ಗೃಹಲಕ್ಷ್ಮಿ ಯೋಜನೆಯಡಿ(Gruha Lakshmi Scheme) ಸರ್ಕಾರದಿಂದ ಮಾಸಿಕ 2 ಸಾವಿರ ರೂ. ಹಣವನ್ನು (Gruhalakshmi Scheme money ) ಪಡೆಯಲು ನೋಂದಣಿ ಮಾಡಿಸಿಕೊಂಡವರ ಖಾತೆಗೆ ಹಣ ಜಮೆಯಾಗುತ್ತಿದೆ. ಇದಲ್ಲದೆ ನೋಂದಣಿ ಮಾಡಿಸುವವರಿಗೆ 12 ರೂ.ಕೂಡ ನೀಡಲಾಗುತ್ತದೆ. ಅಂದರೆ ನೋಂದಣಿಗೆ ಮಾಡುವ ಪ್ರಕ್ರಿಯೆಗೆ 10 ರೂ. ಮತ್ತು ನೋಂದಣಿ ನಂತರ ನೀಡುವ ಪ್ರಿಂಟ್ ಔಟ್ಗೆ 2 ರೂ. ಅನ್ನು ಕೂಡ ಸರ್ಕಾರ ನೀಡುತ್ತಿದೆ.

ರಾಜ್ಯದ ಬಹುತೇಕ ಮನೆ ಯಜಮಾನಿಯರು ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತನ್ನು ಪಡೆದಿದ್ದು, ಇದೀಗ,ಎರಡನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೆ ಕೆಲವರಿಗೆ ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಹಿನ್ನೆಲೆ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಇನ್ನೂ ಕೂಡ ಖಾತೆಗೆ ಜಮೆ ಆಗಿಲ್ಲ. ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರುಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಈ ಯೋಜನೆಯ ಪ್ರಯೋಜನದಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

ಈ ನಡುವೆ ಎರಡನೇ ಕಂತಿನ ಹಣ ಯಾವಾಗ ಜಮೆ ಆಗುತ್ತೆ ಎಂಬ ಪ್ರಶ್ನೆ ಸಹಜವಾಗಿ ಮನೆ ಯಜಮಾನಿಯರನ್ನು ಕಾಡುತ್ತಿದ್ದು, ಈ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ. ಈ ಹಿಂದೆ ಸರ್ಕಾರ ಪ್ರತೀ ತಿಂಗಳ 26ರಂದು ಗೃಹಲಕ್ಷ್ಮೀ ಹಣ ಖಾತೆಗೆ ಸೇರಲಿದೆ ಎಂದು ಸೂಚಿಸಲಾಗಿತ್ತು. ಅಷ್ಟೆ ಅಲ್ಲದೆ, ಮೊದಲ ಕಂತಿನ ಹಣ ಆಗಷ್ಟ್ 30 ರಿಂದ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಅಂದರೆ ಸೆಪ್ಟೆಂಬರ್ 30 ರೊಳಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ 2000 ಸಾವಿರ ರೂಪಾಯಿ ಖಾತೆಗೆ ಜಮೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇಡೀ ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆಗಾಗಿ 1 ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಕೂಡ 82 ಲಕ್ಷ ಜನರ ಖಾತೆಗೆ ಮಾತ್ರ ಜಮೆಯಾಗಿದೆ. ಯಾರ ಖಾತೆಗೆ ಹಣ ಬಂದಿಲ್ಲವೋ, ಎಲ್ಲರಿಗೂ ಸೆಪ್ಟೆಂಬರ್ ತಿಂಗಳ ಒಳಗಾಗಿ ಜಮೆ ಮಾಡಲಾಗುತ್ತದೆ. ಮೊದಲ ಕಂತಿನ ಹಣವೂ ಸೇರಿ ಒಟ್ಟು 4 ಸಾವಿರ ಜಮೆಯಾಗಲಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚೆಗಷ್ಟೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BJP ಕಾರ್ಯಕರ್ತನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಕೈ ಕಾಲು ಮುರಿದುಕೊಂಡ!