Home Business ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆಹೋದ ಯುವಕ | ಡೋಂಗಿ ಬಾಬಾನ ನಂಬಿ ದುಡ್ಡಿನ ಮಳೆ...

ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆಹೋದ ಯುವಕ | ಡೋಂಗಿ ಬಾಬಾನ ನಂಬಿ ದುಡ್ಡಿನ ಮಳೆ ಹರಿಸಿದ ಆತನಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಚೊಂಬು !!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಆತ್ಮೀಯರು ನಮ್ಮ ಬಳಿ ಮಾತು ಬಿಟ್ಟಾಗ ಹೇಗಾದರೂ ಅವರ ಮನ ಒಲಿಸಿ ಮತ್ತೆ ಜೊತೆ ಆಗೋದು ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆ ಹೋದ ಭೂಪ ಕಳೆದು ಕೊಂಡದ್ದು ಎಷ್ಟು ಗೊತ್ತೇ!!?

ಈ ವಿಚಿತ್ರ ಘಟನೆ ನಡೆದಿದ್ದು ಗುಜರಾತ್‌ನ ಅಹಮದಾಬಾದ್ʼನ ಮಕರಬಾ ಪ್ರದೇಶದಲ್ಲಿ. ಇಲ್ಲೇ ಎಲೆಕ್ಟ್ರಾನಿಕ್ ಗೂಡ್ಸ್ ಶಾಪ್ ನಡೆಸುತ್ತಿರುವ ಅಜಯ್ ಪಟೇಲ್ ಎಂಬ ಯುವಕನ ಜೊತೆ ಆತನ ಗೆಳತಿ ಮಾತು ಬಿಟ್ಟಿದ್ದಳು. ಇದೇ ವಿಚಾರವಾಗಿ ಬೇಸತ್ತು,ಆಕೆಯನ್ನು ಹೇಗಾದರೂ ಪಡೆಯಬೇಕೆಂದು ನಿರ್ಧರಿಸಿದ ಈತ ಮಂತ್ರವಾದಿಯನ್ನು ಭೇಟಿಯಾಗಿದ್ದಾನೆ.

ಅವರ ಗೆಳೆತನ ಅದೆಷ್ಟು ಶುದ್ಧವಾಗಿತ್ತೋ ಏನೋ, ಆಕೆಯ ಗೆಳೆತನ ಮತ್ತೆ ಪಡೆಯಲು ಹಣವನ್ನೇ ತ್ಯಾಗ ಮಾಡಲು ಸಿದ್ದವಾಗಿದ್ದ. ಸಿಕ್ಕಿದ್ದೇ ಪಂಚಾಮೃತ ಎಂಬಂತೆ
ಉದ್ಯಮಿಯನ್ನು ಸರಿಯಾಗಿಯೇ ಮಂತ್ರವಾದಿ ಪುಸಲಾಯಿಸಿಕೊಂಡಿದ್ದು, ಬರೋಬ್ಬರಿ 43 ಲಕ್ಷ ವಂಚಿಸಿದ್ದಾನೆ.

ಅಜಯ್ ಪಟೇಲ್ ತನ್ನ ಸಾಮಾನ್ಯ ಸ್ನೇಹಿತನ ಮೂಲಕ ಅನಿಲ್ ಜೋಶಿ ಅನ್ನೋ ಮಂತ್ರವಾದಿಯನ್ನು ಪರಿಚಯಿಸಿಕೊಂಡ. ಆತ ಅಜಯ್ ಪಟೇಲ್ʼಗೆ ತನ್ನ ಗೆಳತಿಯನ್ನು ತನ್ನ ಮಾಟ-ಮಂತ್ರದ ಮೂಲಕ ಮರಳಿ ಕರೆತರುವುದಾಗಿ ಭರವಸೆ ನೀಡಿದ್ದ. ಇವನ ಮೋಸದ ಕೃತ್ಯ ನಂಬಿದ ಉದ್ಯಮಿ ಆತನ ವಿವಿಧ ತಂತ್ರ ವಿದ್ಯೆಯ ಹೆಸರಿನಲ್ಲಿ ಮಂತ್ರವಾದಿಗೆ ಹಣವನ್ನು ನೀಡಿದ್ದಾನೆ.

ಅಜಯ್ ಪಟೇಲ್ ಪ್ರಕಾರ, ಅವರು ಮೊದಲು 11,400 ರೂ.ಗಳನ್ನು ಮೇ 2020ರಲ್ಲಿ ನೀಡಿದರು. ಅಂದಿನಿಂದ ಇಲ್ಲಿಯವರೆಗೆ, ವಿವಿಧ ಸಂದರ್ಭಗಳಲ್ಲಿ ಒಟ್ಟು 43 ಲಕ್ಷ ರೂಪಾಯಿಗಳನ್ನು ಮಂತ್ರವಾದಿಗೆ ನೀಡಲಾಗಿದೆಯಂತೆ.

ತಂತ್ರಿಗಳಿಗೆ ಹಣ ನೀಡಿದ ನಂತರ ಅಜಯ್ ಪಟೇಲ್ ಸಮಸ್ಯೆ ಬಗೆಹರಿಯದನ್ನು ಕಂಡು, ಮಾಂತ್ರಿಕನ ಮೋಸದ ಜ್ವಾಲೆಗೆ ಬಿದ್ದಿರೋದನ್ನು ಅರಿತು ಸರ್ಖೇಜ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ನಿರ್ಧರಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅಜಯ್ ಪಟೇಲ್, ‘ನಾನು ಸರ್ಖೇಜ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ಸಾಕ್ಷ್ಯಗಳೊಂದಿಗೆ ದೂರು ದಾಖಲಿಸಿದ್ದೇನೆ. ಇದು 400ಕ್ಕೂ ಹೆಚ್ಚು ಆಡಿಯೋ ರೆಕಾರ್ಡಿಂಗ್‌ಗಳಿವೆ. ಹಣ ವರ್ಗಾವಣೆಯ ಎಲ್ಲಾ ಪುರಾವೆಗಳನ್ನ ಸಹ ನಾನು ನೀಡಿದ್ದೇನೆ. ತಂತ್ರಜ್ಞನ ಪತ್ನಿ ಗುರು ಧರ್ಮಾಜಿ ಕೂಡ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.