Home latest Atiq Ahmed son encounter: ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಪುತ್ರ ಅಸದ್ ಔಟ್ ಎನ್’ಕೌಂಟರ್...

Atiq Ahmed son encounter: ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಪುತ್ರ ಅಸದ್ ಔಟ್ ಎನ್’ಕೌಂಟರ್ ನಲ್ಲಿ ಹೊಡೆದು ಹಾಕಿದ ಯೋಗಿ ಸರ್ಕಾರ್

Atiq Ahmed son encounter

Hindu neighbor gifts plot of land

Hindu neighbour gifts land to Muslim journalist

Atiq Ahmed son encounter: ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರ ಮತ್ತು ಇದೀಗ ಜೈಲಿನಲ್ಲಿರುವ ರಾಜಕಾರಣಿ ಅತಿಕ್ ಅಹ್ಮದ್ ನ ಪುತ್ರ ಅಸದ್ ( Uttar Pradesh encounter) ಹಾಗೂ ಆತನ ಸಹಾಯಕ ಗುಲಾಮ್ ನನ್ನು ಎನ್ಕೌಂಟರ್ ನಲ್ಲಿ (Atiq Ahmed son encounter) ಹತ್ಯೆ ಮಾಡಲಾಗಿದೆ.

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಆತನ ಬಂಧನಕ್ಕೆ ದಾಳಿ ನಡೆಸಿದ ಸಂದರ್ಭ ಎನ್ಕೌಂಟರ್ ನಡೆದು ಹೋಗಿದೆ. ಎನ್ಕೌಂಟರ್ ನಲ್ಲಿ ಅಸದ್ ಹಾಗೂ ಆತನ ಸಹಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಎಸ್ಪಿ ಶಾಸಕನ ಹತ್ಯೆಯ ಸಾಕ್ಷಿಯಾಗಿದ್ದ ವ್ಯಕ್ತಿ ಉಮೇಶ್ ಪಾಲ್. ಉಮೇಶ್ ಪಾಲ್ ನನ್ನು ಅತೀಕ್ ಅಹಮದ್ ನ ತಂಡ ಹಾಡು ಹಗಲೇ ಶೂಟ್ ಮಾಡಿ ಕೊಂದು ಹಾಕಿದ್ದರು. ಅಂದಿನ. ಶೂಟ್ ಔಟ್ ನಲ್ಲಿ ಇಬ್ಬರು ಗನ್ ಮಾನ್ ಗಳು ಕೂಡಾ ಹುತಾತ್ಮರಾಗಿದ್ದರು. ಘಟನೆಯ ಸುದ್ದಿ ಕೇಳಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ರುದ್ಧರಾಗಿ ‘ ಮಿಟ್ಟಿ ಮೇ ಮಿಲಾದುಂಗ ‘ ( ಮಣ್ಣಿನಲ್ಲಿ ಹೂತು ಹಾಕುತ್ತೇನೆ) ಎನ್ನುವ ಸ್ಟೇಟ್ಮೆಂಟ್ ನೀಡಿದ್ದರು. ತದನಂತರ ಈಗ ಕೆಲವು ಎನ್ಕೌಂಟರ್ ನಡೆದು ಹೋಗಿದೆ. ಉಮೇಶ್ ಪಾಲನ್ನು ಕೊಂದ ಆರೋಪಿಗಳು ಸೇರಿದಂತೆ ಅತಿ ಆತೀಕ್ ಅಹಮದ್ ನ ಒಬ್ಬ ಮಗನನ್ನು ಈ ಹಿಂದೆಯೇ ಹತ್ಯೆ ಮಾಡಲಾಗಿತ್ತು. ಇದೀಗ ಇನ್ನೊಬ್ಬ ಮಗ ಹತನಾಗಿದ್ದಾನೆ.

ಎನ್ಕೌಂಟರ್ ನಲ್ಲಿ ಹತ್ಯೆಯಾದ ಅಸದ್ ನಿಂದ ಕೆಲವು ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಟಿಎಫ್ ಮೂಲಗಳು ಮಾಹಿತಿ ನೀಡಿವೆ. ರೌಡಿ ಶೀಟರ್ ಅಸದ್ ಅಹ್ಮದ್ ತಲೆಗೆ ಈ ಹಿಂದೆ ಪೊಲೀಸರು 5 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದರು.

ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಅವರ ಸಹೋದರಿ ಆಯೇಷಾ ನೂರಿ ಅವರ ಮಗಳೊಂದಿಗೆ ಅಸಾದ್ ಮದುವೆ ನಿಶ್ಚಯವಾಗಿತ್ತು. ಅಸಾದ್ ಗೆ ಕಳೆದ ವರ್ಷ ನಿಶ್ಚಿತಾರ್ಥವಾಗಿತ್ತು. ತನ್ನ ಮತ್ತು ತನ್ನ ಕುಟುಂಬಸ್ಥರನ್ನು ಎನ್ಕೌಂಟರ್ ಮಾಡಿ ಸಾಯಿಸಲಾಗುತ್ತದೆ, ತಮಗೆ ರಕ್ಷಣೆ ಕೊಡಿ ಎಂದು ಅತೀಕ್ ಅಹ್ಮದ್ ಇತ್ತೀಚಿಗೆ ಬೇಡಿಕೊಂಡಿದ್ದ. ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಅತೀಕ್ ಅಹ್ಮದ್, ಗುಜರಾತ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ.

ಉತ್ತರ ಪ್ರದೇಶ ಸರ್ಕಾರವು ನನ್ನನ್ನು ನಾಶ ಮಾಡಿದೆ. ನನ್ನ ಇಡೀ ಕುಟುಂಬವನ್ನು ನಾಶ ಮಾಡಿದೆ. ಸಬರಮತಿ ಜೈಲಿನಲ್ಲಿ ಕಿರುಕುಳ ನೀಡಲಾಗುತ್ತಿದೆ. ನನ್ನನ್ನೂ ಎನ್ಕೌಂಟರ್ ಮಾಡಿ ಕೊಳ್ಳುತ್ತಾರೆ ಎಂದು ಹೇಳಿದ್ದ.
2006ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಮಾರ್ಚ್ 28ರಂದು ಅಲ್ಲಿನ ನ್ಯಾಯಾಲಯ ಅಹ್ಮದ್ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದುದನ್ನು ನಾವಿಲ್ಲಿ ನೆನೆಯಬಹುದು.

ಇದನ್ನೂ ಓದಿ: Complaint against dog : ಮುಖ್ಯಮಂತ್ರಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು