Home latest Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!

Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!

Gruha Jyoti scheme
Image source: Udayavani

Hindu neighbor gifts plot of land

Hindu neighbour gifts land to Muslim journalist

Gruha Jyoti Scheme: ನಿನ್ನೆ ಕಾಂಗ್ರೆಸ್ ಸರಕಾರ ಗೃಹಜ್ಯೋತಿ (Gruha Jyoti Scheme) ಮಾರ್ಗಸೂಚಿ ಘೋಷಿಸಿದೆ. ಈ ವೇಳೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ಇದೆಯೋ ಇಲ್ಲವೋ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರವಾಗಿ ಇದೀಗ ಇಂಧನ ಸಚಿವ ಕೆ.ಜೆ. ಜಾರ್ಜ್ (K. J. George) ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್ “ ಎಲ್ಲ ಬಾಡಿಗೆದಾರರಿಗೂ ಉಚಿತವಾಗಿ 200 ಯೂನಿಟ್​ ವಿದ್ಯುತ್ ಸಿಗುತ್ತದೆ.​ ಆದರೆ, ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಸೂಕ್ತವಾದ ದಾಖಲೆಗಳು ಇರಬೇಕು” ಎಂದು ಹೇಳಿದರು.

“ಬಾಡಿಗೆ ಮನೆಯಲ್ಲಿದ್ದು ಎಷ್ಟು ವರ್ಷವಾಯಿತು ಎಂಬುದರ ದಾಖಲೆ. ಮನೆ ಮಾಲೀಕ ಆಸ್ತಿ ತೆರಿಗೆ ಕಟ್ಟಿರಬೇಕು. ಎಷ್ಟು ಬಾಡಿಗೆ ಮನೆಗಳಿವೆ ಎಂದು ಘೋಷಣೆ ಮಾಡಿರಬೇಕು. ಬಾಡಿಗೆದಾರರು ವಿದ್ಯುತ್​​ ಬಿಲ್​ ಮತ್ತು ಬಾಡಿಗೆ ಕರಾರು ಪತ್ರವನ್ನು ಅರ್ಜಿಯ ಜೊತೆಗೆ ನೀಡಬೇಕು. ಇನ್ನು ಬಾಡಿಗೆದಾರರು ನಕಲಿ ಮಾಹಿತಿಗಳನ್ನು ನೀಡಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗವುದು” ಎಂದು ಸಚಿವರು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯ ಜಾರಿಗೆ ಆದೇಶ ಹೊರಬಿದ್ದಿದೆ. ಗೃಹಜ್ಯೋತಿ ಯೋಜನೆ ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ಸರ್ಕಾರದಿಂದ ಪ್ರತ್ಯೇಕ ಆದೇಶವನ್ನು ಹೊರಡಿಸಲಾಗಿದೆ. ನಿನ್ನೆ ಮಾರ್ಗಸೂಚಿ ಪ್ರಕಟವಾಗಿದೆ.

ಇದನ್ನೂ ಓದಿ: Kerala Highcourt: ತನ್ನ ಮಕ್ಕಳೆದುರು ನಗ್ನಳಾಗಿ ನಿಂತು ಚಿತ್ರ ಬಿಡಿಸಲು ಹೇಳಿದ ಮಹಿಳೆ: ಹೈಕೋರ್ಟು ನೀಡಿದ ತೀರ್ಪೇನು?