Home Interesting 1 ವಾರದ ಅಂತರದಲ್ಲಿ ಸರ್ಕಾರಿ ಬಸ್ ನಲ್ಲಿ 2 ಹೆಣ್ಣು ಮಕ್ಕಳ ಜನನ | ಆ...

1 ವಾರದ ಅಂತರದಲ್ಲಿ ಸರ್ಕಾರಿ ಬಸ್ ನಲ್ಲಿ 2 ಹೆಣ್ಣು ಮಕ್ಕಳ ಜನನ | ಆ ಎರಡು ಹೆಣ್ಣುಮಕ್ಕಳಿಗೆ ಜೀವನಪರ್ಯಂತ ಉಚಿತ ಬಸ್ ಪ್ರಯಾಣ

Hindu neighbor gifts plot of land

Hindu neighbour gifts land to Muslim journalist

ಹೈದರಾಬಾದ್: ಸರ್ಕಾರಿ ಬಸ್‍ಗಳಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವನಪರ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡಿದೆ.

ನವೆಂಬರ್ 30ರಂದು ನಾಗರಕರ್ನೂಲ್ ಡಿಪೋಗೆ ಸೇರಿದ ಬಸ್‍ನಲ್ಲಿ ಪೆದ್ದಕೋತಪಲ್ಲಿ ಗ್ರಾಮದ ಬಳಿ ಮಹಿಳೆಯೊಬ್ಬರಿಗೆ ಹೆಣ್ಣು ಮಗು ಜನಿಸಿತ್ತು. ನಂತರ ಡಿಸೆಂಬರ್ 7ರಂದು ಸಿದ್ದಿಪೇಟೆ ಬಳಿ ಆಸಿಫಾಬಾದ್ ಡಿಪೋಗೆ ಸೇರಿದ ಬಸ್‍ನಲ್ಲಿ ಇನ್ನೋರ್ವ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ಈ ಇಬ್ಬರು ಮಹಿಳೆಯರಿಗೆ ಅನಿರೀಕ್ಷಿತವಾಗಿ ಬಸ್‍ನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಟಿಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದ್ದರು.

ಬಳಿಕ ಟಿಎಸ್‌ಆರ್‌ಟಿಸಿ ಸಿಬ್ಬಂದಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಆಂಬುಲೆನ್ಸ್ ಮೂಲಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಇದೀಗ ತಾಯಿ ಮಕ್ಕಳು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಟಿಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ. ಸಿ. ಸಜ್ಜಾನರ್ ಟಿಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜೀವನಪರ್ಯಂತ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡುವುದಾಗಿ ಘೋಷಿಸಿದರು.