Home latest ಇಲ್ಲೊಂದು ನಾಯಿಗೋಸ್ಕರ ನಡೆದ ಗಲಾಟೆ| ಬರೋಬ್ಬರಿ 14 ಮಂದಿಗೆ ಗಾಯ, 57 ಜನರ ವಿರುದ್ಧ ದೂರು...

ಇಲ್ಲೊಂದು ನಾಯಿಗೋಸ್ಕರ ನಡೆದ ಗಲಾಟೆ| ಬರೋಬ್ಬರಿ 14 ಮಂದಿಗೆ ಗಾಯ, 57 ಜನರ ವಿರುದ್ಧ ದೂರು ದಾಖಲು| ಅಷ್ಟಕ್ಕೂ ಕಾರಣ ಏನು ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

ಕೊಪ್ಪಳ : ನಾಯಿಯಂದ್ರೆ ಅನೇಕರಿಗೆ ಪ್ರೀತಿ ಜಾಸ್ತಿ. ಅಷ್ಟೇ ಪ್ರೀತಿಯಿಂದ ಕೆಲವರು ತಮ್ಮ ನಾಯಿಗಳನ್ನು ಸಾಕಿ ಬೆಳೆಸುತ್ತಾರೆ. ಆದರೆ ಇಲ್ಲೊಂದು ಘಟನೆ ನಡೆದಿದೆ. ಅದು ಕೂಡಾ ನಾಯಿಯಿಂದ. ಹಾಗೂ ಇದು ಮಾರಾಮಾರಿಗೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಂಕಾಪುರದ ಸೂಜಿ ನರಿಯಪ್ಪ ಗೊಲ್ಲರ್ ಎಂಬುವವರು ಮುಧೋಳ ನಾಯಿಯನ್ನು ಸಾಕಿದ್ದರು. ಈ ನಾಯಿ ಬೇರೊಬ್ಬರ ಜಮೀನಿಗೆ ನುಗ್ಗಿದ ಕಾರಣದಿಂದಾಗಿಯೇ ಎರಡು ಗುಂಪುಗಳ ನಡುವೆ ಮಾರಾಮಾರಿಗೆ ಕಾರಣವಾಗಿದೆ.

ಬಂಕಾಪುರದ ಸೂಜಿ ನರಿಯಪ್ಪ ಗೊಲ್ಲರ್ ಸಾಕಿದ ನಾಯಿ, ಶನಿವಾರ ಸಂಜೆ ಬೀರಪ್ಪ ಬುರಡಿ ಎಂಬುವವರ ಜಮೀನಿಗೆ ನುಗ್ಗಿದ ಕಾರಣದಿಂದಾಗಿ ಎರಡು ಗುಂಪುಗಳ ನಡುವೆ ದೊಡ್ಡ ಜಗಳವೇ ಆಗಿದೆ. ಕೈ ಕೈ ಮಿಲಾಯಿಸೋ ಹಂತಕ್ಕೆ ಹೊಡೆದಾಟ ಪ್ರಾರಂಭವಾಗಿದೆ.

ನಾಯಿ ಜಮೀನಿಗೆ ನುಗ್ಗಿದರ ಪರಿಣಾಮ ಈ ಹೊಡೆದಾಟದಲ್ಲಿ 14 ಮಂದಿ ಗಾಯಗೊಂಡು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ 57 ಜನರ ವಿರುದ್ಧ ದೂರು ದಾಖಲಾಗಿದೆ.

ಬಂಕಾಪುರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದ ತರಹ ಇರುವುದರಿಂದ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.