Home latest ಮಗಳ ಹೆಣವನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ.ನಡೆದೇ ಮನೆ ಸೇರಿದ ತಂದೆ | ಈ...

ಮಗಳ ಹೆಣವನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ.ನಡೆದೇ ಮನೆ ಸೇರಿದ ತಂದೆ | ಈ ದೃಶ್ಯ ನೋಡಿ ನಿಮ್ಮ‌ ಕಣ್ಣಾಲಿಗಳು ಮಂಜಾಗುವುದು ಖಂಡಿತ

Hindu neighbor gifts plot of land

Hindu neighbour gifts land to Muslim journalist

ಅನಾರೋಗ್ಯದ ಕಾರಣದಿಂದ ಮೃತಪಟ್ಟ ಏಳು ವರ್ಷದ ಮಗಳ ದೇಹವನ್ನು ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಮನಕಲಕುವ ದೃಶ್ಯದ ವಿಡಿಯೋವೊಂದು ವೈರಲ್ ಆಗಿದೆ. ಛತ್ತೀಸಗಡದ ಸುರ್ಗುಜಾ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಏಳು ವರ್ಷದ ಮಗಳು ಸುರೇಖಾಳನ್ನು ಅಮ್ಹಾಲಾ ಗ್ರಾಮದ ನಿವಾಸಿ ಈಶ್ವರ್ ದಾಸ್ ಅವರು ಶುಕ್ರವಾರ ಮುಂಜಾನೆ ಲಖನ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.

“ಬಾಲಕಿಯ ಆಮ್ಲಜನಕ ಮಟ್ಟ ಬಹಳ ಕಡಿಮೆ ಇತ್ತು. ಬಾಲಕಿಯು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಮಗಳ ಸ್ಥಿತಿ ಒಂದೇ ಸಮನೆ ಕ್ಷೀಣಿಸತೊಡಗಿತ್ತು. ಬೆಳಿಗ್ಗೆ 7.30ರ ಸುಮಾರಿಗೆ ಬಾಲಕಿ ಮೃತಳಾದಳು’ ಎಂದು ಆರೋಗ್ಯ ಕೇಂದ್ರದ ಗ್ರಾಮೀಣ ವೈದ್ಯಕೀಯ ಸಹಾಯಕ (ಆರ್‌ಎಂಎ) ಡಾ. ವಿನೋದ್ ಭಾರ್ಗವ್ ತಿಳಿಸಿದ್ದಾರೆ.

ಜಿಲ್ಲೆಯ ಲಖನಪುರ ಗ್ರಾಮದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಬಾಲಕಿ ಮೃತಪಟ್ಟಿದ್ದಾಳೆ. ಶವ ಸಾಗಿಸುವ ವಾಹನ ಬರುವ ಮೊದಲೇ ತಂದೆ, ಮಗಳ ಮೃತದೇಹವನ್ನು ಹೊತ್ತುಕೊಂಡು ನಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯದ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ಆದೇಶ ನೀಡಿದ್ದಾರೆ.