

ಹುಕ್ಕೇರಿ : ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು. ಈ ವಿಶಿಷ್ಟ ದಿನಾಚರಣೆಯನ್ನು ಶ್ರೀ ಬೀರೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಅನುದಾನಿತ ಶಾಲೆ ಎಲಿಮುನ್ನೋಳಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಮಲ್ಲಿಕಾರ್ಜುನ ಮರಡಿ ಪರಿಸರ ಪ್ರೇಮಿಗಳು, ಮಾಜಿ ಸೈನಿಕರು ಇವರ ಸಂಯುಕ್ತ ಆಶ್ರಯದಲ್ಲಿ ಆಚರಣೆ ಮಾಡಲಾಯಿತು.
ದಿವ್ಯ ಸಾನಿಧ್ಯತೆಯನ್ನು ಶ್ರೀ ಶಿವಬಸವ ಸ್ವಾಮೀಜಿ ವಿರಕ್ತ ಮಠ ಹುಕ್ಕೇರಿ ಅಧ್ಯಕ್ಷತೆ ಶ್ರೀ ತೇಜರಾಜ ಪಾಟೀಲ, ಉಪನ್ಯಾಸಕರಾಗಿ ಶ್ರೀನತಿ ದಾನೇಶ್ವರಿ ಪಡೆಕಾರ ವಹಿಸಿದ್ದರು.

ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಲಕ್ಷ್ಮಿ ಕನ್ನಡ ಕಾನ್ವೆಂಟ್ ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಈ ಪರಿಸರ ದಿನಾಚರಣೆಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.













