Home latest Dhruvanarayan’s wife is no more: ಧ್ರುವನಾರಾಯಣ್ ಪತ್ನಿ ವೀಣಾ ನಿಧನ! ಪತಿ ಅಗಲಿದ 15...

Dhruvanarayan’s wife is no more: ಧ್ರುವನಾರಾಯಣ್ ಪತ್ನಿ ವೀಣಾ ನಿಧನ! ಪತಿ ಅಗಲಿದ 15 ದಿನಗಳ ಅಂತರದಲ್ಲೇ ಪತ್ನಿಯೂ ವಿಧಿವಶ

Hindu neighbor gifts plot of land

Hindu neighbour gifts land to Muslim journalist

Dhruvanarayan’s-wife is no more :ಇತ್ತೀಚೆಗಷ್ಟೇ ನಿಧನರಾಗಿದ್ದ ಚಾಮರಾಜನಗರದ(Chamarajanagara) ಕಾಂಗ್ರೆಸ್ ನಾಯಕ ಮಾಜಿ ಸಂಸದ, ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ(R Druvanarayan) ಅವರ ಪತ್ನಿ ವೀಣಾ(Veena) ಅವರು ನಿಧನರಾಗಿದ್ದಾರೆ (Dhruvanarayan’s-wife is no more). ಧ್ರುವನಾರಾಯಣ ಅಗಲಿ ಇನ್ನು ಒಂದು ತಿಂಗಳೇ ಕಳೆದಿಲ್ಲ. ಈ ದುಃಖ ಮಾಸುವ ಮುನ್ನವೇ ಪತ್ನಿ ವೀಣಾ ವಿಧಿವಶರಾಗಿದ್ದು  ಆಪ್ತವಲಯದಲ್ಲಿ ದುಃದ ಛಾಯೆ ಮಾಡಿಸಿದೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಅವರು ಸುಮಾರು 10 ವರ್ಷಗಳಿಂದಲೂ ಹಾಸಿಗೆ ಹಿಡಿದಿದ್ದರು. ಇತ್ತೀಚೆಗೆ ಧ್ರುವನಾರಾಯಣ ಅವರ ನಿಧನದಿಂದ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು ಎನ್ನಲಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ (ಏ. 7) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆಂದು ಮೂಲಗಳು ತಿಳಿಸಿವೆ.

ವೀಣಾ ಧ್ರುವನಾರಾಯಣ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮಾರ್ಚ್ 11ರಂದು ಆರ್‌. ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಧ್ರುವನಾರಾಯಣ್ ನಿಧನದ ನಂತರ ವೀಣಾ ಅವರ ಕಾಯಿಲೆ ಮತ್ತಷ್ಟು ಉಲ್ಭಣಿಸಿತ್ತು.

ಮೃತರ ಅಂತ್ಯಕ್ರಿಯೆನ್ನು ಶುಕ್ರವಾರ ಸಂಜೆಯೇ ಧ್ರುವನಾರಾಯಣ್ ಹುಟ್ಟೂರಾದ ಚಾಮರಾಜ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮಾ. 11ರಂದು ನಿಧನರಾಗಿದ್ದ ಧ್ರುವನಾರಾಯಣ ಅವರ ಅಂತ್ಯಕ್ರಿಯೆಯನ್ನು ಮಾ. 12ರಂದು ಹೆಗ್ಗವಾಡಿಯಲ್ಲೇ ನಡೆಸಲಾಗಿತ್ತು. ಅವರ ಸಮಾಧಿಯ ಪಕ್ಕದಲ್ಲೇ ವೀಣಾ ಅವರ ಅಂತ್ಯಕ್ರಿಯೆಯನ್ನೂ ನಡೆಸಲು ತೀರ್ಮಾನಿಸಿದೆ ಎಂದು ಅವರ ಕುಟುುಂಬದ ಮೂಲಗಳು ತಿಳಿಸಿವೆ.

ಧ್ರುವನಾರಾಯಣ್ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಸಿಗಬೇಕಾಗಿದ್ದ ನಂಜನಗೂಡು ಟಿಕೆಟ್ ಅನ್ನು ಕಾಂಗ್ರೆಸ್ ಅವರ ಪುತ್ರ ದರ್ಶನ್ ಧ್ರುವನಾರಾಯಣ ನೀಡಿತ್ತು. ತಂದೆಯ ಸಾವಿನ ಆಘಾತದಿಂದ ಹಂತಹಂತವಾಗಿ ಹೊರಬಂದಿದ್ದ ದರ್ಶನ್, ಏ. 3ರಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಶುರು ಮಾಡಿದ್ದರು. ಹಳ್ಳಿಹಳ್ಳಿಗಳಿಗೂ ತೆರಳಿ ಮತಯಾಚನೆ ಮಾಡಿದ್ದರು. ಆದರೆ, ಪ್ರಚಾರ ಆರಂಭಿಸಿದ ಮೂರನೇ ದಿನಗಳಲ್ಲಿ ತಾಯಿಯ ಸಾವಿನ ಬರಸಿಡಿಲು ಅವರಿಗೆ ತಟ್ಟಿದೆ. ಮಾ. 11ರಂದು ಧ್ರುವನಾರಾಯಣ ಅವರು ನಿಧನರಾಗಿದ್ದು, ಅದಾಗಿ ಒಂದು ತಿಂಗಳೊಳಗೇ ಈಗ ತಾಯಿಯನ್ನೂ ಕಳೆದುಕೊಂಡಿದ್ದಾರೆ.