Home latest Dakshina kannada: ಕರಾವಳಿಯಲ್ಲಿ ಪೊಲೀಸರ ಕ್ಯಾರೆ ಇಲ್ಲ, ಬ್ಯಾರಿಕೇಡ್‌ಗೆ ಹೊಡೆದು ವಾಹನ ಪರಾರಿ, ದನದ ಮಾಂಸ...

Dakshina kannada: ಕರಾವಳಿಯಲ್ಲಿ ಪೊಲೀಸರ ಕ್ಯಾರೆ ಇಲ್ಲ, ಬ್ಯಾರಿಕೇಡ್‌ಗೆ ಹೊಡೆದು ವಾಹನ ಪರಾರಿ, ದನದ ಮಾಂಸ ಇದ್ದ ಶಂಕೆ !

Dakshina Kannada
Image Credit Source: Vijayakarnataka

Hindu neighbor gifts plot of land

Hindu neighbour gifts land to Muslim journalist

Dakshina Kannada: ಆತೂರು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಸೂಚನೆಯನ್ನೂ ಕ್ಯಾರೇ ಮಾಡದೆ ಬ್ಯಾರಿಕೇಡ್ ಗೆ ಡಿಕ್ಕಿ ಮಾಡಿ ಪಿಕ್ ಅಪ್ ವಾಹನವನ್ನು ನುಂಗಿಸಿಕೊಂಡು ಹೋದ ಘಟನೆ(Dakshina Kannaba News) ನಡೆದಿದೆ. ಈ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿತ್ತು ಎನ್ನುವ ಸಂಶಯ ಹಬ್ಬಿದೆ. ಈ ಘಟನೆ ಇಂದು ಶನಿವಾರ ಮಧ್ಯಾಹ್ನ ನಡೆದಿದೆ.

ಕಡಬ ಠಾಣಾ ವ್ಯಾಪ್ತಿಯ ಆತೂರು ಚೆಕ್‌ಪೋಸ್ಟ್‌ನಲ್ಲಿ ಇಂದು ವೇಗವಾಗಿ ಬಂದ ಪಿಕಪ್ ವಾಹನವೊಂದು ಬ್ಯಾರಿಕೇಡ್‌ಗೆ ಡಿಕ್ಕಿ ಗುದ್ದಿದ್ದು ಅಲ್ಲದೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೂ ಪಿಕಪ್‌ ವಾಹನ ಚಲಾಯಿಸಲು ನೋಡಿದ್ದಾರೆ. ಸ್ಥಳದಲ್ಲಿ ಕರ್ತವ್ಯ ನಿರ್ತರಾಗಿದ್ದ ಪೊಲೀಸ್ ಸಿಬ್ಬಂದಿ ಬದಿಗೆ ಹಾರಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪರಾರಿಯಾದ ಪಿಕಪ್‌ ನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದ್ದಾರೆ. ಆಗ ಚಾಲಕ ವಾಹನವನ್ನು ಅಲ್ಲಿನ ಗೋಳಿತ್ತಡಿ ಸಮೀಪದ ಶಾರದಾನಗರದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಿಕಪ್‌ ವಾಹನದಲ್ಲಿದ್ದ ಮಾಂಸದ ಮೂಟೆಗಳನ್ನು ವಾಹನದಿಂದ ತಪ್ಪಿಸಿ ಚಾಲಕ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಥವಾ ಆ ವಾಹನದಲ್ಲಿ ಎಲೆಕ್ಷನ್ ಗೆ ಹಂಚಲು ಹಣ ಇತ್ತು ಎನ್ನುವ ಸಂಶಯ ಕೂಡಾ ಮೂಡಿದೆ.

ತದನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನ ಸದಾ ಗೋಮಾಂಸ ಹಾಗೂ ಅಕ್ರಮ ಗೋಸಾಗಾಟ ನಡೆಸುತ್ತಿರುವ ವಾಹನ ಎನ್ನಲಾಗಿದೆ. ಇಲ್ಲಿನ ಕೊಯಿಲ ಫಾರ್ಮ್ ಇರುವ ಪರಿಸರದಲ್ಲಿ ನಿರಂತರ ಅಕ್ರಮ ಗೋವಧೆ ನಡೆಯುತ್ತಿದ್ದು, ಇಲ್ಲಿಂದಲೇ ವಾಹನಗಳಲ್ಲಿ ಇತರೆಡೆಗೆ ಮಾಂಸ ಸಾಗಾಟವಾಗುತ್ತಿದೆ ಎಂದು ನಂಬಲಾಗಿದೆ.

ದಿನವೂ ಬೆಳ್ಳಂಬೆಳಿಗ್ಗೆ ವಾಹನಗಳಲ್ಲಿ ಚೆಕ್‌ಪೋಸ್ಟ್ ಮೂಲಕವೇ ಮಾಂಸ ಹಾದು ಹೋಗುತ್ತದೆ. ಪೊಲೀಸರಿಗೆ ಎಲ್ಲವೂ ಗೊತ್ತು. ಪೊಲೀಸರ ಮೇಲೆಯೆ ಜನ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರ ಅನುಮತಿಯಲ್ಲೇ ಅಕ್ರಮ ಗೋಮಾಂಸ ಸಾಗಾಟವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಟ್ರಿಕ್ಟ್ ಆಗಿರುವ ಪೋಲೀಸರು ಇಲ್ಲಿ ಜೀವ ಭಯದಿಂದಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಹಿಂದೆ ಇದೇ ಆತೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ವಾಹನ ತಡೆದಾಗ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಆಗ ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಆಗ ಚೆಕ್‌ಪೋಸ್ಟ್‌ ಶೆಡ್‌ ಅನ್ನು ಪುಡಿ ಮಾಡಿದ್ದರು. ಈ ವೇಳೆ ಪೊಲೀಸರು ಲಾಟಿ ಚಾರ್ಜ್ ಮಾಡಿದ್ದನ್ನು ಇಲ್ಲಿ ನೆನೆಯಬಹುದು.