

ಕಡಬ : ಪ್ರಕರಣವೊಂದರಲ್ಲಿ ಅರೋಪಿತನಾಗಿ 7 ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತಃ ಬೆಳ್ಳಾರೆ ಸಮೀಪದ ಬಾಳಿಲ ಗ್ರಾಮದ ಮುಪ್ಪೇರಿಯ ನಿವಾಸಿ ಜಗನ್ನಾಥ್ ಎಂಬಾತ ಕಡಬ ತಾಲೂಕಿನ ಹೊಸ್ಮಠ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಬಳಿಕ ತಲೆಮರೆಸಿಕೊಂಡಿದ್ದನು.
ಆರೋಪಿ ಜಗನ್ನಾಥನನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಾಳಲೆ ಎಂಬಲ್ಲಿ ವಶಕ್ಕೆ ಪಡೆಯಲಾಯಿತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್, ಕಡಬ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಎಸೈ ಅಭಿನಂದನ ಹಾಗೂ ತನಿಖಾ ಎಸೈ ಅಕ್ಷಯ್ ಮಾರ್ಗದರ್ಶನದಲ್ಲಿ ಕಡಬ ಠಾಣಾ ಸಿಬ್ಬಂದಿಗಳಾದ ರಾಜು ನಾಯಕ್, ಸಿದ್ದಪ್ಪ ಹೂಗಾರ ಕಾರ್ಯಾಚ ರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.













