Home latest Gents Toilet :3 ವರ್ಷದ ಬಾಲಕಿಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋದ ತಂದೆ! ಆದರೆ ಮುಂದೆ...

Gents Toilet :3 ವರ್ಷದ ಬಾಲಕಿಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋದ ತಂದೆ! ಆದರೆ ಮುಂದೆ ಆದದ್ದೇ ಬೇರೆ!!!

Hindu neighbor gifts plot of land

Hindu neighbour gifts land to Muslim journalist

Gents Toilet: ಪ್ರಪಂಚ (world )ಎಷ್ಟು ಕೆಟ್ಟು ಹೋಗಿದೆ ಎಂದರೆ ಎದುರುಗಡೆ ಹಾಲು ಇದ್ದರೂ ಅದೂ ಬೇರೆ ತಿಳಿ ನೀರು ಅಥವಾ ವಿಷ ಆಗಿರಬಹುದೇ ಎಂಬ ನೂರು ಆಲೋಚನೆಗಳು ತಲೆಗೆ ಬರುತ್ತವೆ. ಕೆಲವೊಮ್ಮೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ ಗಾದೆ ಇದೆ. ಹಾಗೆಯೇ ಇಲ್ಲೊಂದು ಘಟನೆ ಬೆಳಕಿಗೆ ಬಂದಿದೆ.

ವಾಸ್ತವ ಎಂದರೆ ತಂದೆ ಹಾಗೂ ಆತನ 3 ವರ್ಷದ ಮಗಳು ಶಾಪಿಂಗ್‌ಗೆ(shopping ) ಹೋದಾಗ, ಮಗಳು ಶೌಚಾಲಯಕ್ಕೆ ಹೋಗಬೇಕು ಎಂದಿದ್ದಾಳೆ. ಆ ಶಾಪಿಂಗ್‌ ಮಾಲ್‌ನಲ್ಲಿ ಫ್ಯಾಮಿಲಿ ವಾಶ್ ರೂಂ (washroom) ಇಲ್ಲದ ಕಾರಣ ಆತ ಪುರುಷರ ಸಾರ್ವಜನಿಕ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ನಂತರ ಅಲ್ಲಿ ನಡೆದಿದ್ದೇ ಬೇರೆ.

ಮಗಳು ತುಂಬಾ ಚಿಕ್ಕವಳಾದ್ದರಿಂದ ಆಕೆಯನ್ನು ಒಬ್ಬೊಂಟಿಯಾಗಿ ಮಹಿಳೆಯರ ಶೌಚಾಲಯಕ್ಕೆ ತಂದೆಗೆ ಸಾಧ್ಯವಾಗಿಲ್ಲ. ಹೀಗಾಗಿ, ಆತ ಪುರುಷರ ಶೌಚಾಲಯಕ್ಕೆ (Gents Toilet)ಕರೆದೊಯ್ದಿದ್ದಾನೆ. ನಂತರ , ಮಗಳನ್ನು ಹೊರಕ್ಕೆ ಕರೆದುಕೊಂಡು ಬರುವಾಗ ಅದನ್ನು ಕಂಡ ಅಪರಿಚಿತ ಮಹಿಳೆಯೊಬ್ಬಳು, ನೀವು ಹುಡುಗರ ಶೌಚಾಲಯ ಕೋಣೆಗೆ ಹುಡುಗಿಯನ್ನು ಕರೆದುಕೊಂಡು ಹೋಗಲು ಎಷ್ಟು ಧೈರ್ಯ ಎನ್ನುತ್ತಾ ಕಿರುಚುತ್ತಾಳೆ. ಇದನ್ನು ಕಂಡ ತಂದೆ ಗಾಬರಿಗೊಂಡಿದ್ದಾನೆ.

ಈ ಘಟನೆ ಕುರಿತು ಮಾತನಾಡಿರುವ ತಂದೆ, ʻನಾನು ನನ್ನ ಪರಿಸ್ಥತಿ ಬಗ್ಗೆ ಆ ಮಹಿಳೆಗೆ ವಿವರಿಸಿದರೂ, ಆಕೆ ಅರ್ಥ ಮಾಡಿಕೊಳ್ಳಲೇ ಇಲ್ಲ. ನನ್ನ ಮಗಳು ಮೂತ್ರ ವಿಸರ್ಜಿಸಬೇಕಾದರೆ ನಾನು ಏನು ಮಾಡಬೇಕಿತ್ತು?ʼ ಎಂದು ಸಾಮಾಜಿಕ ಜಾಲತಾಣ ಮೂಲಕ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇವರ ಪ್ರಶ್ನೆಗೆ ಹಲವಾರು ಕಾಮೆಂಟ್ ಬಂದಿದ್ದು, ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗುವ ಅಪ್ಪನ ನಿರ್ಧಾರ ಸರಿಯಾಗಿದೆ. ಒಂದು ವೇಳೆ ಮಹಿಳೆಯರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದರೆ ಅಪ್ಪ ಸಾರ್ವಜನಿಕ ಏಟು ತಿನ್ನಬೇಕಿತ್ತು ಅನಿಸುತ್ತೆ. ಒಟ್ಟಿನಲ್ಲಿ ಅಪ್ಪ ತನ್ನ ಮಗಳ ಕಾಳಜಿ ವಹಿಸಿದ್ದು ತಪ್ಪಿಲ್ಲ ಎಂಬ ಹಲವಾರು ಪಾಸಿಟಿವ್ ಕಾಮೆಂಟ್ಗಳು ಬಂದಿವೆ.

ಒಟ್ಟಿನಲ್ಲಿ ಕೆಟ್ಟು ಹೋಗಿರುವ ಸಮಾಜದಲ್ಲಿ ನಾವು ನೋಡುವ ನೋಟ ಬದಲಾಗಿದೆ ಎನ್ನಬಹುದು. ಯಾರೋ ಮಾಡಿದ ಸಮಾಜ ಘಾತುಕ ಕೆಲಸದಿಂದ ಎಲ್ಲರ ಮೇಲೂ ಸಂಶಯ ಪಡುವ ಹಾಗೇ ಆಗಿದೆ.