Home latest School Teacher: ಹಾಸ್ಟೆಲ್ ಹುಡುಗಿಯರು ಬಟ್ಟೆ ಬದಲಿಸುವಾಗ ಕದ್ದು ವಿಡಿಯೋ – ಮೊರಾರ್ಜಿ ಶಾಲೆಯಲ್ಲಿ ಹೀನ...

School Teacher: ಹಾಸ್ಟೆಲ್ ಹುಡುಗಿಯರು ಬಟ್ಟೆ ಬದಲಿಸುವಾಗ ಕದ್ದು ವಿಡಿಯೋ – ಮೊರಾರ್ಜಿ ಶಾಲೆಯಲ್ಲಿ ಹೀನ ಕೃತ್ಯ

Hindu neighbor gifts plot of land

Hindu neighbour gifts land to Muslim journalist

School Teacher: ಕೋಲಾರದ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಸ್ವಚ್ಛತೆ ಹೆಸರಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ (Toilet Pit cleaning) ಪ್ರಕರಣ ಹೊರ ಬಿದ್ದ ಬೆನ್ನಲ್ಲೇ ಅನೇಕ ರೋಚಕ ವಿಚಾರಗಳು ಒಂದೊಂದಾಗಿ ಮುನ್ನಲೆಗೆ ಬರುತ್ತಿವೆ.

 

ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶರಾದ ಸುನೀಲ್‌ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ಜೊತೆಗೆ ಮಕ್ಕಳ ಬಳಿ ಸಮಸ್ಯೆ, ಕುಂದು ಕೊರತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಮಕ್ಕಳು ಬಟ್ಟೆ ಬದಲಾಯಿಸುವ ಫೋಟೊವನ್ನು(Photo and video of changing clothes) ಕಿಡಿಗೇಡಿಗಳು ಸೆರೆ ಹಿಡಿದಿದ್ದು, ಆದರೆ, ಈ ಕೃತ್ಯ ಮಾಡಿದವರು ಯಾರೆಂಬುದು ಗೊತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

 

ನಾವು ಬಟ್ಟೆ ಬದಲಿಸುವ, ಬೆಡ್ ಮೇಲೆ ಮಲಗಿರುವ ಫೋಟೋಗಳನ್ನು ಯಾರೋ ಸೆರೆಹಿಡಿದಿದ್ದಾರೆ. ಇತ್ತೀಚಿಗೆ ಅಧಿಕಾರಿಗಳು ಬಂದಾಗ ಆ ಫೋಟೊ ತೋರಿಸಿದ್ದು, ಆದರೆ ಇಲ್ಲಿ ಮಕ್ಕಳು ಯಾರೂ ಫೋನ್ ಬಳಕೆ ಮಾಡುವುದಿಲ್ಲ. ಆದಾಗ್ಯೂ, ಯಾರೋ ಕಿಟಕಿ ಒಳಗಡೆಯಿಂದ ಫೋಟೊ ತೆಗೆದಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಅಭಿಷೇಕ್ ಅವರಿಂದ ಕೂಡ ನ್ಯಾಯಾಧೀಶರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ನಡುವೆ, ಶಾಲೆಯ ಶಿಕ್ಷಕರ (School Teacher) ವಿರುದ್ಧ ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ. ವೈಯರ್‌ನಿಂದ ಹೊಡೆದಿದ್ದು, ರಾತ್ರಿ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಶಿಕ್ಷೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಇನ್ನು ತಾವು ಬಟ್ಟೆ ಬದಲಾಯಿಸುವಾಗ ಫೋಟೊ ಹಾಗೂ ವಿಡಿಯೊವನ್ನು (Photo and video of changing clothes) ಸೆರೆ ಹಿಡಿಯಲಾಗಿದೆ ಎಂದು ಹೆಣ್ಣು ಮಕ್ಕಳು ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.

 

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ನೀಡಿದ ಬಳಿಕ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಲಾಗಿದೆ. ಮಕ್ಕಳನ್ನು ಶೌಚಾಲಯ ಗುಂಡಿ ಸ್ವಚ್ಛತೆಗೆ ಇಳಿಸಿದ್ದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮೂವರು ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.