Home latest ಮೆಟ್ರೋದಲ್ಲಿ ಮುಂದುವರಿದ ಪ್ರೇಮಿಗಳ ರೊಮ್ಯಾನ್ಸ್‌; ಮಹಿಳಾ ಪ್ರಯಾಣಿಕಳಿಂದ ಸಖತ್‌ ಕ್ಲಾಸ್‌!!! ವೀಡಿಯೋ ವೈರಲ್

ಮೆಟ್ರೋದಲ್ಲಿ ಮುಂದುವರಿದ ಪ್ರೇಮಿಗಳ ರೊಮ್ಯಾನ್ಸ್‌; ಮಹಿಳಾ ಪ್ರಯಾಣಿಕಳಿಂದ ಸಖತ್‌ ಕ್ಲಾಸ್‌!!! ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಮೆಟ್ರೋದಲ್ಲಿ ಇತ್ತೀಚೆಗೆ ಅಶ್ಲೀಲ ವರ್ತನೆಗಳ ಸುದ್ದಿ ಬರುತ್ತಲೇ ಇರುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಈಗ ನಡೆದಿದ್ದು, ಪ್ರೇಮಿಗಳಿಬ್ಬರು ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ ಮಾಡಿದ್ದಾರೆ. ಇದನ್ನು ಕಂಡು ಮಹಿಳೆಯೋರ್ವಳು ಗರಂ ಆಗಿದ್ದು, ಪ್ರೇಮಿಗಳಿಗೆ ಸಖತ್‌ ಕ್ಲಾಸ್‌ ತಗೊಂಡಿದ್ದಾರೆ.

ಈ ಪ್ರೇಮಿಗಳ ರೊಮ್ಯಾನ್ಸ್‌ ವೀಡಿಯೋ ವೈರಲ್‌ ಆಗಿದ್ದು, ಮಹಿಳೆ ವರ್ತನೆ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಪ್ರೇಮಿಗಳು ಮೆಟ್ರೋದಲ್ಲಿ ಕೆನ್ನೆ ಗಿಂಡುತ್ತಾ, ಕೈ ಕೈ ಹಿಡಿದು ಮಜಾ ಮಾಡುತ್ತಿದ್ದರು. ಇದನ್ನು ಅದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆಲ್ಲವನ್ನು ನೀವು ಇಲ್ಲಿ ಮಾಡಬೇಡಿ, ಏನೇ ಇದ್ದರೂ ಹೊರಗೆ ಇಟ್ಟುಕೊಳ್ಳಿ. ಉಳಿದ ಪ್ರಯಾಣಿಕರಿಗೆ ಕಾಣುವ ಹಾಗೆ ನಿಮ್ಮ ಪ್ರೀತಿ ಪ್ರದರ್ಶನ ಮಾಡುವ ಅಗತ್ಯವಿಲ್ಲ ಎಂದು ಸಖತ್‌ ಆಗಿಯೇ ಕ್ಲಾಸ್‌ ತಗೊಂಡಿದ್ದಾರೆ.

ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸರಿ ಎಂದು ಹೇಳಿದರೆ, ಇನ್ನು ಕೆಲವರು ಪ್ರೇಮಿಗಳು ಕೈ ಹಿಡಿಯುವ ಸ್ವಾತಂತ್ರ್ಯ ಕೂಡಾ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.