Home latest Dalit woman: ಇಬ್ಬರು ಮುಸ್ಲಿಂಮರಿಂದ ದಲಿತ ಯುವತಿ ಮೇಲೆ ಅತ್ಯಾಚಾರ- ಗೋ ಮಾಂಸ ತಿನ್ನಿಸಿ ಚಿತ್ರ...

Dalit woman: ಇಬ್ಬರು ಮುಸ್ಲಿಂಮರಿಂದ ದಲಿತ ಯುವತಿ ಮೇಲೆ ಅತ್ಯಾಚಾರ- ಗೋ ಮಾಂಸ ತಿನ್ನಿಸಿ ಚಿತ್ರ ಹಿಂಸೆ !! ಇದರ ಹಿಂದಿದೆ ಈ ಖತರ್ನಾಕ್ ಗೆಳತಿಯ ಪ್ಲಾನ್

Image credit Source: Hindupost.in

Hindu neighbor gifts plot of land

Hindu neighbour gifts land to Muslim journalist

Dalit Woman :ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಅದರಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೆ ಇಂದಿಗೂ ನಡೆಯುತ್ತಿದೆ. ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರ (Dalit Woman) ಮೇಲೆ ಇಬ್ಬರು ಮುಸ್ಲಿಮರು ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ವೀಡಿಯೋ ಚಿತ್ರೀಕರಣ ಮಾಡಿ, ಆಕೆಗೆ ಬಲವಂತವಾಗಿ ಗೋಮಾಂಸ (Beef) ತಿನ್ನಿಸಿ ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ದಲಿತ ಮಹಿಳೆಯ ಗೆಳೆತಿಯೊಬ್ಬಳು ಮುಸ್ಲಿಂ ಆಗಿದ್ದು, ಆಕೆಯೇ ದಲಿತ ಮಹಿಳೆಯನ್ನು ಹೋಟೆಲ್‌ಗೆ ಕರೆಸಿದ್ದಾಳೆನ್ನಲಾಗಿದೆ. ಮುಸ್ಲಿಂ ಮಹಿಳೆಯಿಂದ ದಲಿತ ಮಹಿಳೆಯು 2 ಲಕ್ಷ ರೂಪಾಯಿ ಸಾಲ ಪಡೆದಿದ್ದಾಳೆ. ಈ ಸಾಲದ ಹಣವನ್ನು ವಾಪಸ್‌ ಕೊಡುವುದಾಗಿ ದಲಿತ ಮಹಿಳೆಯು ಮುಸ್ಲಿಂ ಮಹಿಳೆಗೆ ತಿಳಿಸಿದ್ದು, ಹೀಗಾಗಿ, ಮುಸ್ಲಿಂ ಮಹಿಳೆಯು ಹೋಟೆಲ್‌ಗೆ ಬರುವಂತೆ ತಿಳಿಸಿದ್ದಾರೆ. ಆದರೆ, ಸಾಲದ ಹಣ ವಾಪಸ್‌ ಪಡೆದುಕೊಂಡ ಬಳಿಕ ಇಬ್ಬರು ಮುಸ್ಲಿಮರು ದಲಿತ ಯುವತಿಯ ಅತ್ಯಾಚಾರವೆಸಗಿದ್ದಾರೆ.

ದಲಿತ ಮಹಿಳೆಯು ಹೋಟೆಲ್‌ ಕೋಣೆಗೆ ಬಂದ ಬಳಿಕ ಅವರ ಮೇಲೆ ಬಿ ಫಾರ್ಮಾ ವಿದ್ಯಾರ್ಥಿ ಶೋಯಬ್ ಹಾಗೂ ಬಾರ್ಬರ್‌ ಶಾಪ್‌ ಇಟ್ಟುಕೊಂಡಿರುವ ನಜೀಮ್‌ ಎಂಬುವರು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.ದಲಿತ ಯುವತಿಗೆ ಬರುವ ಔಷಧ ನೀಡಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಸಾಲದೆಂಬಂತೆ ಅತ್ಯಾಚಾರದ ವಿಡಿಯೊ ರೆಕಾರ್ಡ್‌ ಮಾಡಿ 5 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.ಗೆಳತಿಯ ಮೋಸದ ಜಾಲಕ್ಕೆ ಬಿದ್ದು ಅತ್ಯಾಚಾರಕ್ಕೀಡಾದ ಮಹಿಳೆಗೆ ಮುಸ್ಲಿಂ ಮಹಿಳೆ ಸೇರಿ ಮೂವರೂ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ಅಷ್ಟೆ ಅಲ್ಲದೇ, ಬಲವಂತವಾಗಿ ಮಹಿಳೆಗೆ ಗೋಮಾಂಸ ತಿನ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಅತ್ಯಾಚಾರದ ವಿಡಿಯೊ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿರುವ ಪಾಪಿಗಳು, ವಿಡಿಯೊ ವೈರಲ್‌ ಮಾಡಬಾರದು ಎಂದಾದರೆ 5 ಲಕ್ಷ ರೂ. ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಇದಲ್ಲದೆ, ಮಹಿಳೆಯ ಭಾವಿ ಪತಿಗೆ ವಿಡಿಯೊ ಕಳುಹಿಸಿ ಕಿಡಿಗೇಡಿಗಳು ಕಾಶ್ಮೀರಕ್ಕೆ ಎಸ್ಕೇಪ್ ಆಗಿದ್ದಾರೆ. ಗೆಳತಿಯಿಂದಲೇ ಮೋಸ ಹೋದ ದಲಿತ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ