Home latest ಕೋವಿಡ್ ಲಸಿಕೆ ಸರ್ಟಿಫಿಕೇಟ್‌ನಿಂದ ಬಯಲಾಯ್ತು ಗಂಡನ 2ನೇ ಹೆಂಡತಿ ರಹಸ್ಯ!

ಕೋವಿಡ್ ಲಸಿಕೆ ಸರ್ಟಿಫಿಕೇಟ್‌ನಿಂದ ಬಯಲಾಯ್ತು ಗಂಡನ 2ನೇ ಹೆಂಡತಿ ರಹಸ್ಯ!

Hindu neighbor gifts plot of land

Hindu neighbour gifts land to Muslim journalist

ತನ್ನ ಗಂಡನ ಇನ್ನೊಂದು ಸಂಸಾರ ಬಯಲು ಮಾಡಲು ಸಹಾಯ ಮಾಡಿತು ಒಂದು ಕೋವಿಡ್ ಲಸಿಕೆ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಅಂದರೆ ನಂಬುತ್ತೀರಾ ? ಹೌದು..ಹೆಂಡ್ತಿ ಪ್ರತಿಸಲ ತನ್ನ ಗಂಡನಿಗೆ ಬೇರೊಂದು ಸಂಸಾರ ಇದೆ ಎಂದು ವಾದ ಮಾಡುತ್ತಲೇ ಇದ್ದರೂ, ಆಕೆಯ ಮಾತನ್ನು ಯಾರೂ ಕೇಳ್ತಾ ಇರಲಿಲ್ಲ. ಬದಲಾಗಿ ಆಕೆಗೇ ಚಿತ್ರಹಿಂಸೆ ನೀಡಲಾಗುತ್ತಿತ್ತು. ಆದರೆ ಸತ್ಯ ಒಂದಲ್ಲ ಒಂದು ದಿನ ಬಯಲಿಗೆ ಬರಲೇಬೇಕಲ್ಲ…ಬಂತು ನೋಡಿ…ಸರ್ಟಿಫಿಕೇಟ್ ಮೂಲಕ. ಈ ಘಟನೆಯ ಕಂಪ್ಲೀಟ್ ವಿವರ ಇಲ್ಲಿದೆ.

ಹೌದು, ಲಸಿಕೆ ಸರ್ಟಿಫಿಕೇಟ್‌ನಿಂದ ಪತಿಯ ಎರಡನೇ ಹೆಂಡತಿ ರಹಸ್ಯ ಬಯಲಾಗಿದೆ. ಪರಿಣಾಮ ಇದೀಗ ಪತಿ ಹಾಗೂ ಮಾವನ ವಿರುದ್ಧ ಕೇಸ್ ದಾಖಲಾಗಿದೆ.

ಮಧ್ಯಪ್ರದೇಶದ ಇಂಧೋರ್‌ನಲ್ಲಿ ರಾಜೇಂದ್ರ ಭೀಸೆ ಕುಟುಂಬ ನೆಲೆಸಿದೆ. 20 ವರ್ಷಗಳ ಹಿಂದೆ ರಾಜೇಂದ್ರ ಭೀಸೆ, ರೇಖಾ ಬೀಸೆಯನ್ನು ಮದುವೆಯಾಗಿದ್ದ. ಆದರೆ ಕಳೆದ 8 ವರ್ಷಗಳಿಂದ ಪತ್ನಿ ರೇಖಾ ಬೀಸೆಗೆ ಇನ್ನಿಲ್ಲದ ಚಿತ್ರ ಹಿಂಸೆ ನೀಡಲಾಗುತ್ತಿತ್ತು. ಪತಿಯ ತಂದೆ ಗಹಿನಾಥ್ ಬೀಸೆ ಕೂಡ ಸಣ್ಣ ಪುಟ್ಟ ಕಾರಣಗಳಿಗೆ ತೊಂದರೆ ಕೊಡುತ್ತಿದ್ದರಂತೆ.

ಪತಿ ಹಾಗೂ ಮಾವನ ಚಿತ್ರಹಿಂಸೆಯಿಂದ ಬೇಸತ್ತ ಪತ್ನಿ ರೇಖಾ ಭೀಸೆ ಹಲವು ಬಾರಿ ತವರು ಮನೆಗೆ ಹೋಗಿ ನೆಲೆಸಿದ್ದಾಳೆ. ಬಳಿಕ ಕುಟುಂಬದವರ ರಾಜಿ ಪಂಚಾಯಿತಿಯಿಂದ ಮತ್ತೆ ಪತಿ ಮನೆಗೆ ವಾಪಾಸ್ಸಾಗಿದ್ದಾಳೆ. ಪ್ರತಿ ಬಾರಿ ಜಗಳವಾಡಿ ರಾಜೀ ಸಂಧಾನದ ವೇಳೆ ರೇಖಾ ಭೀಸೆ, ತನ್ನ ಪತಿಗೆ ಬೇರೆ ಮಹಿಳೆ ಜೊತೆ ಸಂಬಂಧವಿರುವ ಅನುಮಾನ ವ್ಯಕ್ತಪಡಿಸುತ್ತಿದ್ದಳು‌ ಆದರೆ ಯಾವುದೇ ಸಾಕ್ಷಿ ಆಧಾರ ಆಕೆಯ ಬಳಿ ಇರಲಿಲ್ಲ. ಹೀಗಾಗಿ ರೇಖಾ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ.

ಇತ್ತೀಚೆಗೆ ರಾಜಿ ಸಂಧಾನದ ಬಳಿಕ ಪತಿ ಮನೆಯಲ್ಲಿದ್ದ ರೇಖಾ ಭೀಸೆಗ ಪತಿಯ ಶರ್ಟ್ ಜೇಬಿನಲ್ಲಿ ಕೋವಿಡ್ ಲಸಿಕಾ ಸರ್ಟಿಫಿಕೇಟ್ ಪತ್ತೆಯಾಗಿದೆ. ಇದು ಸರ್ಟಿಫಿಕೇಟ್ ಮೇಲೆ ಭೂಮಿತಾ ಅನ್ನೋ ಹೆಸರಿತ್ತು. ಆದರೆ ಪತಿಯ ಹೆಸರಿನ ಬಳಿ ರಾಜೇಂದ್ರ ಭೀಸೆ ಅನ್ನೋ ಹೆಸರಿತ್ತು. ಅಲ್ಲಿಗೆ ಕಳೆದ 8 ವರ್ಷಗಳಿಂದ ರೇಖಾ ಭೀಸೆಗೆ ಇದ್ದ ಅನುಮಾನಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿತ್ತು. ತನ್ನ ಮೇಲೆ ಚಿತ್ರ ಹಿಂಸೆ ನೀಡಲು ಇದೇ ಕಾರಣ ಅನ್ನೋ ಅಂಶವೂ ಮನದಟ್ಟಾಯಿತು.

ಕೋವಿಡ್ ಸರ್ಟಿಫಿಕೇಟ್ ಸಾಕ್ಷ್ಯದ ಕುರಿತು ಪತಿಯನ್ನು ಪ್ರಶ್ನಿಸಲು ರೇಖಾ ಮುಂದಾಗಲಿಲ್ಲ. ಕಾರಣ ತನ್ನಿಂದ ಸರ್ಟಿಫಿಕೇಟ್ ಕಸಿದು ಕೊಳ್ಳವು ಸಾಧ್ಯತೆ ಹಾಗೂ ಅದಕ್ಕೊಂದು ಕತೆ ಕಟ್ಟುವ ಸಾಧ್ಯತೆಯನ್ನು ಅರಿತ ರೇಖಾ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತನ್ನ ಪತಿಗೆ 2 ಮದುವೆಯಾಗಿದೆ. ನನಗೆ ಮೋಸ ಮಾಡಲಾಗಿದೆ. ಪತಿ ಹಾಗೂ ಮಾವ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಪತಿಯನ್ನು ತೊರೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ರಾಜೇಂದ್ರ ಹಾಗೂ ರೇಖಾ ದಂಪತಿಗೆ ನಾಲ್ಕು ಮಕ್ಕಳು. ಎರಡು ಗಂಡು ಹಾಗೂ ಎರಡು ಹೆಣ್ಣು. ಇದರಲ್ಲಿ ಮೂವರು ಮಕ್ಕಳನ್ನು ರಾಜೇಂದ್ರ ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ. ಕಿರಿಯ ಮಗಳು ಮಾತ್ರ ರೇಖಾ ಜೊತೆ ಇದ್ದಾಳೆ. ಈಗ ರೇಖಾ ಬೀಸೆ ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾಳೆ. ರಾಜೇಂದ್ರ ಭೀಸೆ ಹಾಗೂ ತಂದೆ ಗಹೀನಾಥ್ ಭೀಸೆ ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.