

ಮೈಸೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ದಂಪತಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಬೆಳಕಿಗೆ ಬಂದಿದೆ.
ಅತಿಯಾದ ಸಾಲ ಮಾಡಿಕೊಂಡಿದ್ದ ದಂಪತಿಗಳು ಸಾಲಗಾರರ ಕಿರುಕುಳಕ್ಕೆ ಹಾಗೂ ಆರ್ಥಿಕ ಸಮಸ್ಯೆಗೆ ಹೆದರಿ ಊಟದಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಮೃತಪಟ್ಟ ದಂಪತಿಗಳನ್ನು ಉದಯಗಿರಿ ಸಾತಾಗಳ್ಳಿ ಲೇಔಟ್ ನಿವಾಸಿಗಳಾದ ಸಂತೋಷ್(26) ಹಾಗೂ ಭವ್ಯ(22) ಎಂದು ಗುರುತಿಸಲಾಗಿದೆ.













