Home latest Bank Accounts: ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಬಹುದು? RBI ನಿಯಮಗಳು ಏನು ಹೇಳುತ್ತವೆ...

Bank Accounts: ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಬಹುದು? RBI ನಿಯಮಗಳು ಏನು ಹೇಳುತ್ತವೆ ಗೊತ್ತಾ?

Image source Credit: DNA India

Hindu neighbor gifts plot of land

Hindu neighbour gifts land to Muslim journalist

Bank Accounts: ಪ್ರತಿಯೊಬ್ಬರು ಭವಿಷ್ಯದ ಹಿತ ದೃಷ್ಟಿಯಿಂದ ಬ್ಯಾಂಕ್ ಖಾತೆ (Bank account)ಹೊಂದಿರುವುದು ಸಾಮಾನ್ಯ ವಿಷಯ. ಮೋದಿ ಸರ್ಕಾರ ಜನ ಧನ ಯೋಜನೆಯನ್ನು ಜಾರಿಗೆ ತಂದ ಬಳಿಕ ಬ್ಯಾಂಕ್‌ ಖಾತೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಉಳಿತಾಯ ಖಾತೆಯನ್ನು ಬಳಸುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಬ್ಯಾಂಕುಗಳಲ್ಲಿ ವಹಿವಾಟು(Bank Transaction)ನಡೆಸುವಾಗ ಅಥವಾ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುವಾಗ, ಗರಿಷ್ಠ ಎಷ್ಟು ಬ್ಯಾಂಕ್ ಖಾತೆಗಳನ್ನು(Bank Accounts)ತೆರೆಯಬಹುದು ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡದಿರದು.

ಭಾರತದಲ್ಲಿ ತೆರೆಯಬಹುದಾದ ಗರಿಷ್ಠ ಎಷ್ಟು ಖಾತೆಗಳನ್ನು ತೆರೆಯಬಹುದು ಎಂದು ಆರ್‌ಬಿಐ ಮಾಹಿತಿ ನೀಡಿದೆ. ಭಾರತದಲ್ಲಿ ಬ್ಯಾಂಕ್ ಖಾತೆ ತೆರೆಯಲು ಯಾವುದೇ ರೀತಿಯ ಮಿತಿ ಇಲ್ಲ. ರಿಸರ್ವ್ ಬ್ಯಾಂಕ್ ಖಾತೆಗಳ ಸಂಖ್ಯೆಗೆ ಯಾವುದೇ ಮಿತಿಯನ್ನು ನಿಗದಿ ಮಾಡಿಲ್ಲ. ನಿಮಗೆ ಬೇಕಾದಷ್ಟು ಬ್ಯಾಂಕ್ ಖಾತೆಗಳನ್ನು ನೀವು ತೆರೆಯಲು ಅವಕಾಶವಿದೆ. ವ್ಯವಹಾರ, ಮಕ್ಕಳ ವಿದ್ಯಾಭ್ಯಾಸ , ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಹೀಗೆ ನಾನಾ ಕಾರಣಗಳಿಗೆ ಹೆಚ್ಚಿನವರು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಹೊಂದಿರುತ್ತಾರೆ.

ಬ್ಯಾಂಕ್ ಗಳು ಜನರಿಗೆ ಅರ್ಥಿಕ ನೆರವು, ಭದ್ರತೆ, ಹಣ ವಿನಿಮಯ ಮಾಡಲು ಮೊಬೈಲ್ ಟ್ರಾನ್ಸ್ಫರ್, ಆನ್ಲೈನ್ ಬ್ಯಾಂಕಿಂಗ್ ಹೀಗೆ ಸೌಲಭ್ಯ ನೀಡುತ್ತಿರುವುದರಿಂದ, ಗ್ರಾಹಕರು ಉಳಿತಾಯ ಖಾತೆಯನ್ನು ತೆರೆಯಲು ಮುಂದಾಗುತ್ತಿದ್ದಾರೆ. ಆಯಾ ಬ್ಯಾಂಕ್ ನ ನಿಯಮಗಳಿಗೆ ಅನುಸಾರ ಬಡ್ಡಿ ದರ, ಠೇವಣಿ ಯೋಜನೆ, ಖಾತೆ ಯೋಜನೆಗಳಲ್ಲಿ ವ್ಯತ್ಯಾಸವಿದ್ದು, ಅನೇಕ ಬ್ಯಾಂಕ್ ನಲ್ಲಿ ಖಾತೆ ಹೊಂದಿದರೆ ಹೆಚ್ಚು ಪ್ರಯೋಜನಕಾರಿ ಎಂಬ ಭಾವನೆ ಹಲವರಲ್ಲಿದೆ.ಆದರೆ, ಇಲ್ಲಿ ಕೆಲ ವಿಚಾರಗಳನ್ನು ಗಮನಿಸಬೇಕು. ಪ್ರತಿ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್‌ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂಬ ಅಂಶವನ್ನು ನೆನಪಿಟ್ಟುಕೊಳ್ಳಬೇಕು.

ಈ ನಡುವೆ ಇದಕ್ಕಾಗಿ ನೀವು ನಿಮ್ಮ ಖಾತೆಗಳಿಂದ ವಹಿವಾಟುಗಳನ್ನು ಆಗಾಗ ಮಾಡಬೇಕಾಗುತ್ತದೆ. ನಿಮ್ಮ ಖಾತೆಯನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿ ಇರಿಸದೇ ಹೋದರೆ ಬ್ಯಾಂಕ್ ನಿಮ್ಮ ಖಾತೆಯನ್ನು ನಿಷ್ಕ್ರಿಯ ಮಾಡಬಹುದು. ಹೀಗಾಗಿ, ನೀವು ನಿಮ್ಮ ಎಲ್ಲಾ ಖಾತೆಗಳನ್ನು ಬಳಸುತ್ತಿರಬೇಕು. ಪ್ರಸ್ತುತ, ಸಂಬಳ ಖಾತೆಯನ್ನು ಹೊರತುಪಡಿಸಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದನ್ನು ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಕಡ್ಡಾಯ ಮಾಡಲಾಗಿದೆ.

ಒಂದು ವೇಳೆ, ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕ್ ನಿರ್ದಿಷ್ಟ ದಂಡ, ಅಥವಾ ಶುಲ್ಕ ಪಾವತಿಸಬೇಕಾಗುತ್ತದೆ.ಬ್ಯಾಂಕ್ ಗಳು ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ , ಭದ್ರತೆ, ಸೌಲಭ್ಯ ಹೀಗೆ ನಾನಾ ಸೇವೆಗಳನ್ನು ನೀಡುವುದರ ಜೊತೆಗೆ ಶುಲ್ಕವನ್ನೂ ಕೂಡ ವಸೂಲಿ ಮಾಡುತ್ತದೆ. ಹಾಗಾಗಿ ಗ್ರಾಹಕರು ಖಾತೆ ಹೊಂದಿರುವ ಬ್ಯಾಂಕ್ ನ ಸೇವೆಗಳ ಜೊತೆಗೆ ಶುಲ್ಕ, ದಂಡದ ಬಗ್ಗೆ ಅರಿತಿರಬೇಕಾಗಿರುವುದು ಅವಶ್ಯಕವಾಗಿದೆ.