Home latest ಬೈಕ್ ನಲ್ಲಿ ತೆರಳುತ್ತಿರುವಾಗ ಹಿಂಬದಿಯಿಂದ ಬಂದು ತಲವಾರದಿಂದ ಕಡಿದು ಹತ್ಯೆ ಮಾಡಿದ ದುಷ್ಕರ್ಮಿಗಳು | ನವವಿವಾಹಿತನ...

ಬೈಕ್ ನಲ್ಲಿ ತೆರಳುತ್ತಿರುವಾಗ ಹಿಂಬದಿಯಿಂದ ಬಂದು ತಲವಾರದಿಂದ ಕಡಿದು ಹತ್ಯೆ ಮಾಡಿದ ದುಷ್ಕರ್ಮಿಗಳು | ನವವಿವಾಹಿತನ ದಾರುಣ ಸಾವು!!!

Hindu neighbor gifts plot of land

Hindu neighbour gifts land to Muslim journalist

ಆತನ ಮದುವೆ ಆಗಿ ಕೇವಲ ಎಂಟು ತಿಂಗಳಷ್ಟೇ ಆಗಿತ್ತು. ಸುಂದರ ಕನಸುಗಳನ್ನು ಹೊತ್ತು ತಿರುಗಾಡುತ್ತಿದ್ದ ಯುವಕ. ಕಣ್ಣು ತುಂಬಾ ಮುಂದಿನ ಜೀವನದ ಸಂಸಾರದ ಕನಸು ತುಂಬಿಕೊಂಡಿದ್ದನು. ಆದರೆ ಬರಸಿಡಿಲಿನಂತೆ ಆತನ ಸಾವು ಬಂದು ಬಡಿದಿತ್ತು.

ನವವಿವಾಹಿತನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ- ಕಾತ್ರಾಳ ರಸ್ತೆ ನಡುವೆ ನಡೆದಿದೆ.

ಚಿಂತಾಮಣಿ ಬಂಡಗರ (26) ಕೊಲೆಯಾದ ಯುವಕ. ತಡರಾತ್ರಿ 10 ಗಂಟೆ ಸುಮಾರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಐನಾಪುರದಿಂದ ಕಾತ್ರಾಳ ಕಡೆ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಐನಾಪೂರ ಗ್ರಾಮದಲ್ಲಿ ಮೆಡಿಕಲ್ ಶಾಪ್ ಹಾಕಿದ್ದನಂತೆ. ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದಾಗ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಆಗಮಿಸಿರೋ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.