Home latest ಅಣ್ಣನ ಹೆಂಡತಿಯ ಮೇಲೆ ಕಾಮದ ಕಣ್ಣು ಬಿತ್ತು ತಮ್ಮನಿಗೆ | ಅತ್ತಿಗೆಯನ್ನು ಪಡೆಯಲು ತಮ್ಮ ಮಾಡಿದ...

ಅಣ್ಣನ ಹೆಂಡತಿಯ ಮೇಲೆ ಕಾಮದ ಕಣ್ಣು ಬಿತ್ತು ತಮ್ಮನಿಗೆ | ಅತ್ತಿಗೆಯನ್ನು ಪಡೆಯಲು ತಮ್ಮ ಮಾಡಿದ ಖತರ್ನಾಕ್ ಪ್ಲ್ಯಾನ್!!! ನಂತರ ಏನಾಯ್ತು?

Hindu neighbor gifts plot of land

Hindu neighbour gifts land to Muslim journalist

ಅಣ್ಣ, ತಮ್ಮ, ಅತ್ತಿಗೆ ಆ ಮನೆಯಲ್ಲಿ ಮೂವರು ವಾಸವಾಗಿದ್ದರು. ಚೆನ್ನಾಗಿಯೇ ಇತ್ತು ಆ ಸಂಸಾರ.
ಆದರೆ ತಮ್ಮನಿಗೆ ಬರ ಬರುತ್ತಾ ಏನಾಯಿತೋ ಗೊತ್ತಿಲ್ಲ, ತಾಯಿ ಸ್ಥಾನದಲ್ಲಿದ್ದ ಅತ್ತಿಗೆಯ ಮೇಲೆ ಮನಸ್ಸಾಗಿದೆ. ಅನಂತರ ನಡೆದದ್ದೆಲ್ಲ…ಮಾತ್ರ ದುರಂತ.

ತಮ್ಮ ಭೂಪೇಂದ್ರನಿಗೆ ತನ್ನ ಅಣ್ಣ ಮೋಹಿತ್ ಪತ್ನಿಯ ಮೇಲೆ ಅಂದರೆ ಅತ್ತಿಗೆ ಮೇಲೆ ಕಣ್ಣುಬಿದ್ದಿದೆ. ಮತ್ತೊಬ್ಬರ ಮೇಲೆ ಪ್ರೀತಿ ಹುಟ್ಟುವುದು ಸಹಜ. ಆದರೆ ಅದು ಒಮ್ಮೊಮ್ಮೆ ಕ್ರೈಂಗೆ ಕಾರಣವಾಗುತ್ತದೆ.

ಆದರೆ ಪ್ರೀತಿಯ ಕಾರಣಕ್ಕೆ ಅದೆಷ್ಟೋ ಕೊಲೆ, ಕಿಡ್ನ್ಯಾಪ್, ರೇಪ್ ಗಳಂಥ ಕ್ರೈಂಗಳು ನಡೆಯುವುದು ಪ್ರತಿದಿನ ವರದಿ ಮುಖಾಂತರ ತಿಳಿಯುತ್ತದೆ. ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಇಲ್ಲಿ ಯುವಕನೊಬ್ಬ ಅತ್ತಿಗೆಯ ಮೇಲೆ ಅಂದರೆ ಅಣ್ಣನ ಪತ್ನಿಯ ಮೇಲೆ ಹುಟ್ಟಿದ ಪ್ರೀತಿ ಮತ್ತು ಆಕೆಯನ್ನು ಪಡೆಯಲೇಬೇಕು ದುರಾಸೆಯ ಹಠಕ್ಕೆ ಬಿದ್ದು, ಸ್ವಂತ ಅಣ್ಣನನ್ನೇ ಹತ್ಯೆಗೈದಿದ್ದಾನೆ. ಆರೋಪಿಯನ್ನು ಭೂಪೇಂದ್ರ ಸಹು ಎಂದು ಗುರುತಿಸಲಾಗಿದೆ.

ಈತ ಈಗ ಪೊಲೀಸರ ವಶದಲ್ಲಿದ್ದಾನೆ. ಹಾಗೇ, ಮೃತನ ಹೆಸರು ಮೋಹಿತ್ ಸಹು ಎಂದಾಗಿದೆ. ಮೋಹಿತ್ ತನ್ನ ಸಹೋದರ ಭೂಪೇಂದ್ರ ಮತ್ತು ಪತ್ನಿಯೊಂದಿಗೆ ಲಖನೌದ ಚಿನ್ಹಾತ್ ಎಂಬಲ್ಲಿ ಬಾಡಿಗೆ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದ. ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಭೂಪೇಂದ್ರನಿಗೆ ತನ್ನ ಅಣ್ಣ ಮೋಹಿತ್ ಪತ್ನಿಯ ಮೇಲೆ ಅಂದರೆ ಅತ್ತಿಗೆ ಮೇಲೆ ಕಣ್ಣುಬಿತ್ತು. ಆತ ಆಕೆಯನ್ನು ಪ್ರೀತಿಸ ತೊಡಗಿದ. ಹಾಗೇ, ಅತ್ತಿಗೆಯೊಂದಿಗೆ ಸ್ವಲ್ಪ ಸಲಿಗೆಯಿಂದ ವರ್ತಿಸಲೂ ತೊಡಗಿದ್ದ. ಆಕೆಗೇ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬರತೊಡಗಿದ. ಇದು ಅವಳಿಗೆ ಇಷ್ಟವಾಗುತ್ತಿರಲಿಲ್ಲ. ತನ್ನ ಪತಿ ಮೋಹಿತ್ ಬಳಿ ಇದನ್ನು ಹೇಳಿಕೊಂಡಿದ್ದಳು ಕೂಡಾ. ಮೋಹಿತ್ ತನ್ನ ಸೋದರನಿಗೆ ಬುದ್ದಿಮಾತು ಹೇಳಲು ಹೋದಾಗ, ಮಾತು ಗಲಾಟೆಗೆ ತಿರುಗಿತು. ನಂತರ ಭೂಪೇಂದ್ರ ಮೋಹಿತ್ ಕುತಿಗೆಯನ್ನು ಕೊಯ್ದು ಹತ್ಯೆ ಮಾಡಿದ್ದಾನೆ.

ಮೋಹಿತ್ ಮತ್ತು ಭೂಪೇಂದ್ರ ನಡುವೆ ಗಲಾಟೆಯಾಗಿ, ಮೋಹಿತ್ ಹತ್ಯೆಯಾಗುವ ಹೊತ್ತಲ್ಲಿ ಆತನ ಪತ್ನಿ ಮನೆಯ ಮಹಡಿ ಮೇಲೆ ನಿದ್ದೆ ಮಾಡುತ್ತಿದ್ದಳು. ಆದರೆ ನಂತರ ಕೆಳಗೆ ಬಂದ ತುಂಬ ಶಾಕ್ ಆಗಿದ್ದಾಳೆ. ಭೂಪೇಂದ್ರ ತಾನು ಅಪರಾಧ ಮಾಡಿದ್ದಲ್ಲದೆ, ಅದನ್ನು ಮೋಹಿತ್ ಪತ್ನಿ ತಲೆಗೆ ಕಟ್ಟಲೂ ಪ್ರಯತ್ನಿಸಿದ. ತಮ್ಮಿಬ್ಬರ ಮಧ್ಯೆ ಜಗಳ ಹುಟ್ಟುಹಾಕಿದ್ದೇ ಅವಳು ಎಂದೂ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.