Home latest ಮದುವೆ ಮಂಟಪದಲ್ಲೇ ಹೃದಯಾಘಾತಕ್ಕೊಳಗಾದ ವಧು ! ಸಾವಿನ ಮನೆಯಲ್ಲೇ ನಡೆದೋಯ್ತು ಒಂದು ಅಚ್ಚರಿಯ ವಿಷಯ!

ಮದುವೆ ಮಂಟಪದಲ್ಲೇ ಹೃದಯಾಘಾತಕ್ಕೊಳಗಾದ ವಧು ! ಸಾವಿನ ಮನೆಯಲ್ಲೇ ನಡೆದೋಯ್ತು ಒಂದು ಅಚ್ಚರಿಯ ವಿಷಯ!

Bride Dies of Heart Attack

Hindu neighbor gifts plot of land

Hindu neighbour gifts land to Muslim journalist

Bride Dies of Heart Attack : ಹೃದಯಾಘಾತ(heart attack) ಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಈ ಹೃದಯಾಘಾತಕ್ಕೆ ನವವಧುವೊಬ್ಬಳು ಬಲಿಯಾಗಿದ್ದಾರೆ (Bride Dies of Heart Attack). ಮದುವೆಯ ಮಧುರ ಕ್ಷಣದಲ್ಲಿ ವಧುವಿನ ಪಾಲಿಗೆ ಸಾವು(death) ಬಂದೆರಗಿದೆ. ಎಲ್ಲರೂ ಖುಷಿಯ ಸಂದರ್ಭದಲ್ಲಿ ಇರಬೇಕಾದರೆ ವಧು(bride) ವಿಗೆ ಮದುವೆ ಮಂಟಪದಲ್ಲಿ ಹೃದಯಾಘಾತ ಉಂಟಾಗಿ, ಸಾವನ್ನಪ್ಪಿರುವ ಆಘಾತಕಾರಿ ಘಟನೆ ಗುಜರಾತಿನ ಸುಭಾಷ್‌ನಗರದ ಭಾವನಗರದಲ್ಲಿ ನಡೆದಿದೆ.

ಗುಜರಾತಿ(Gujarati)ನ ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆಯನ್ನು ನಿಶ್ಚಿಯಿಸಲಾಗಿದ್ದು, ಜಿನಾಭಾಯಿ ರಾಥೋಡ್ ಎಂಬವರ ಪುತ್ರಿ ಹೇತಾಲ್ ಹಾಗೂ ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಟಾರ್ ಅವರ ಮಗ ವಿಶಾಲ್ ಇಬ್ಬರಿಗೂ ಅದ್ದೂರಿಯಾಗಿ, ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆ(marriage) ಶಾಸ್ತ್ರಗಳು ನಡೆಯುತ್ತಿತ್ತು.

ಈ ಸಂಭ್ರಮದ ಮಧ್ಯೆ ವಧು ಹೇತಾಲ್ ಏಕಾಏಕಿ ತಲೆ ಸುತ್ತಿ ಬಿದ್ದಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆ(hospital) ಗೆ ದಾಖಲಿಸಿದರು. ಆದರೆ ದುರಾದೃಷ್ಟವಶಾತ್ ಹೇತಾಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿದ ಕುಟುಂಬಸ್ಥರಿಗೆ ಭಾರೀ ಅಘಾತವೇ ಆಗಿದೆ. ಇನ್ನೇನು ಖುಷಿಯಿಂದ ಮದುವೆ ಆಗಿ ಮಗಳು ಗಂಡ(husband) ನ ಮನೆಗೆ ಹೋಗುತ್ತಾಳೆ ಎಂದುಕೊಂಡಿದ್ದ ಹೆತ್ತವರಿಗೆ ಭಾರೀ ಆಘಾತವಾಗಿತ್ತು. ಗಂಡನ ಮನೆಗೆ ಹೋಗುವ ಮುನ್ನ ಯಮರಾಯ ಕರೆದೊಯ್ಯುವಂತಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಆದರೆ ಆಶ್ಚರ್ಯ ಏನೆಂದರೆ, ಮಗಳ ಸಾವಿನ ಶೋಕದ ನಡುವೆಯೂ ಮದುವೆ ಕಾರ್ಯಕ್ರಮ ನಿಲ್ಲಿಸಲಿಲ್ಲ. ಕುಟುಂಬಸ್ಥರು ಮದುವೆಯ ಆಚರಣೆಯನ್ನು ಮುಂದುವರಿಸಲು ನಿರ್ಧರಿಸಿ, ಮೃತ ಹೇತಾಲ್‌ನ ತಂಗಿಯ ಜೊತೆ ಮದುವೆ ಮಾಡಲು ಸಂಬಂಧಿಕರು ನಿರ್ಧರಿಸಿದರು. ಹೇತಾಲ್‌ನ ತಂಗಿ ಒಪ್ಪಂದದ ಮೇರೆಗೆ ವರ ವಿಶಾಲ್ ಮದುವೆಯಾಗಿದ್ದಾರೆ. ಸದ್ಯ ಸೂತಕದ ಮನೆಯಲ್ಲಿ ಮದುವೆ ಆಗಿದ್ದು ಆಶ್ಚರ್ಯವೇ ಸರಿ.